ಮೋದಿ ಕುರಿತು ನಾಲಿಗೆ ಹರಿಬಿಟ್ಟ ಸಚಿವ ರೋಷನ್ ಬೇಗ್

ಈ ಸುದ್ದಿಯನ್ನು ಶೇರ್ ಮಾಡಿ

Modi--02
ಬೆಂಗಳೂರು. ಅ. 13 : ಸಚಿವ ರೋಷನ್ ಬೇಗ್ ಕಂಟ್ರೋಲ್ ತಪ್ಪಿ ವರ್ತಿಸುತ್ತಿದ್ದಾರೆ. ಮೋದಿಯವರನ್ನು ಕುರಿತು ಬೇಗ್ ಬಳಸಿದ ಪದಗಳು ನಿಜಕ್ಕೂ ಖಂಡನೀಯ. ವ್ಯಕ್ತಿಗೆ ಗೌರವ ಕೊಡದಿದ್ದರೂ ಹುದ್ದೆಯನ್ನು ಗೌರವಿಸಲೇಬೇಕು.  ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ರೋಷಾವೇಶದದಿಂದ ಮಾತನಾಡುವ ಭರದಲ್ಲಿ ಪ್ರಧಾನಿ ವಿರುದ್ಧ ಅಸಭ್ಯ, ಅಸಂವಿಧಾನಿಕ , ಅವಹೇಳನಕಾರಿ ಪದಗಳನ್ನು ಬಳಸಿ ಎಲುಬಿಲ್ಲದ ನಾಲಿಗೆ ಏನನ್ನಾದರೂ ಮಾತನಾಡುತ್ತೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ.

ಅಧಿಕಾರಕ್ಕೆ ಬಂದ ಬಳಿಕ ಎಲ್ಲರೂ ‘ನಮ್ಮ ಮೋದಿ ನಮ್ಮ ಮೋದಿ’ ಅಂತ ಹೊಗಳುತ್ತಿದ್ದರು. ಅಧಿಕಾರಕ್ಕೆ ಕೂರಿಸಿದ ಜನರೇ ಈಗ ಮೋದಿಯನ್ನು ಶಪಿಸುತ್ತಿದ್ದಾರೆ, “ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ಜನರು ‘ಈ ಸೂ.. ಮಗ ಬೊ.. ಮಗ ಏನೆಲ್ಲಾ ಮಾಡಿಬಿಟ್ಟ’ ಎಂದು ಬೈಯುತ್ತಿದ್ದಾರೆ” ಎಂದು ರೋಷನ್ ಬೇಗ್ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕಾರಣ. ಇಂದಿರಾಗಾಂಧಿ,ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರೆ.  ಇದೆ ವೇಳೆ ಯಡಿಯೂರಪ್ಪನವರ ಕುರಿತಾಗಿಯೂ ನಾಲಿಗೆ ಹರಿಬಿಟ್ಟ ಬೇಗ್ “ನಾವು 5 ರೂಪಾಯಿಗೆ ಬ್ರೇಕ್ ಫಾಸ್ಟ್, 10 ರೂಪಾಯಿಗೆ ಊಟ ಕೊಡ್ತೀದ್ದೀವಿ. ನೀವ್ಯಾಕೆ ಇದನ್ನೆಲ್ಲ ಕೊಡಲಿಲ್ಲ? ಯಡಿಯೂರಪ್ಪ ಸಿಎಂ ಆಗಿದ್ದಾಗ ಜನರಿಗೆ ಇದೆನ್ನೆಲ್ಲ ಯಾಕೆ ಕೊಡಲಿಲ್ಲ? ಯಡಿಯೂರಪ್ಪ ಬರೀ ಶೋಭಾ ಕರಂದ್ಲಾಜೆ ನೋಡ್ಕೊಂಡು ನಿಂತಿದ್ದರು” ಎಂದು ರೋಷನ್ ಬೇಗ್ ವ್ಯಂಗ್ಯವಾಡಿದರು.

ಬೇಗ್ ಅವರ ಈ ಮಾತುಗಳಿಗೆ ಬಿಜೆಪಿ ಕಡೆಯಿಂದ ತೀವ್ರ ಖಂಡವೇ ವ್ಯಕ್ತವಾಗಿದ್ದು ಸಚಿವರಾಗಿದ್ದುಕೊಂಡು ಪ್ರಧಾನಿಗೆ ಗೌರವ ಕೊಡಲು ಗೊತ್ತಾಗ ಬೇಗ್ ವರ್ತನೆ ಕಾಂಗ್ರೆಸ್ ನ ಸಂಸ್ಕೃತಿಯನ್ನು ತೋರಿಸುತ್ತದೆ ಎನ್ನುತ್ತಿದ್ದಾರೆ. ಬೇಗ್ ಅವರು ಸಚಿವ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ರೋಷನ್ ಬೇಗ್ ವಿರುದ್ಧ ಪ್ರತಾಪಸಿಂಹ ಟೀಕೆ : 

ಮೈಸೂರು: ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾಡಿದ್ದಾರೆ. ನೋಟ್ ಬ್ಯಾನ್‍ನಲ್ಲಿ ಅವರು ನಷ್ಟಕ್ಕೆ ಒಳಗಾಗಿರಬಹುದು ಆದ್ದರಿಂದ ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಟೀಕೆ ಮಾಡಿದ್ದಾರೆ. ಅವರಿಗೆ ಸಂಸಾರ ಸಮಸ್ಯೆ ಇರಬಹುದು, ಅವರು ಬೆಳೆದ ವಾತಾವರಣ ನೋಡಿದರೆ, ಅವರ ಮಾತು ಕೇಳಿದರೆ ನನಗೆ ಅಚ್ಚರಿಯಾಗುತ್ತದೆ ಎಂದು ಹೇಳಿದ್ದಾರೆ.

(ನಿಮ್ಮ ಅನಿಸಿಕೆ- ಅಭಿಪ್ರಾಯಗಳನ್ನು ತಪ್ಪದೆ ಕೆಳಗಿನ ಇನ್ ಬಾಕ್ಸ್ ನಲ್ಲಿ  ಬರೆಯಿರಿ )

Facebook Comments

Sri Raghav

Admin