ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪಿ.ಸಾಯಿನಾಥ್ ಅವರಿಗೆ ಬಸವಶ್ರೀ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

P-Sayinath--02

ಬೆಂಗಳೂರು,ಅ.13-ಹಿರಿಯ ಪತ್ರಕರ್ತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕøತ ಪಿ.ಸಾಯಿನಾಥ್ ಅವರು ಪ್ರಸಕ್ತ ವರ್ಷದ ಪ್ರತಿಷ್ಟಿತ ಬಸವಶ್ರೀ ಪ್ರಶಸ್ತಿಗೆ ಪುರಸ್ಕøತರಾಗಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮಾಜ ಸುಧಾಕರಿಗೆ ಕಳೆದ ಹಲವು ವರ್ಷಗಳಿಂದ ಚಿತ್ರದರ್ಗದ ಮುರುಘಾ ಮಠವು ಬಸವಶ್ರೀ ಪ್ರಶಸ್ತಿಯನ್ನು ನೀಡಿ ಸನ್ಮಾನಿಸುತ್ತಿದೆ.  ಪ್ರಶಸ್ತಿಯು 5 ಲಕ್ಷ ನಗದು, ಸ್ಮರಣ ಸಂಚಿಕೆ ಒಳಗೊಂಡಿರುತ್ತದೆ. 2016ನೇ ಸಾಲಿನ ಬಸವಶ್ರೀ ಪ್ರಶಸ್ತಿಗೆ ಪುರಸ್ಕøತರಾಗಿರುವ ಪಿ.ಸಾಯಿನಾಥ್ ಅವರಿಗೆ ಇದೇ 23ರಂದು ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀಗಳು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಭಾರತೀಯ ಪತ್ರಿಕೋದ್ಯಮದಲ್ಲಿ ಪಿ.ಸಾಯಿನಾಥ್ ಅವರಿಗೆ ಅತ್ಯಂತ ಎತ್ತರದ ಸ್ಥಾನಮಾನ ಇದೆ. 1980ರಿಂದ ಪತ್ರಿಕೋದ್ಯಮಕ್ಕೆ ಸೇರ್ಪಡೆಯಾದ ಅವರು, ತಮ್ಮ ವೃತ್ತಿಯುದ್ದಕ್ಕೂ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ, ಗ್ರಾಮೀಣ ಭಾರತ, ಕೃಷಿ,ಕುಡಿಯುವ ನೀರು, ಹೆಣ್ಣು ಮಕ್ಕಳ ಶಿಕ್ಷಣ, ಮೂಢನಂಬಿಕೆ, ಕಂದಾಚಾರ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದರು.  ಪತ್ರಿಕೋದ್ಯಮದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಓರ್ವ ಅತ್ಯುತ್ತಮ ಛಾಯಾಗ್ರಾಹಕರು ಹೌದು. ಪೀಪಲ್ ಆರ್ಚಿವ್ ರೂರಲ್ ಇಂಡಿಯಾದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಅವರು ಈ ಮೂಲಕ ಗ್ರಾಮೀಣ ಜನರ ಸೇವೆಯಲ್ಲೂ ತೊಡಗಿದ್ದರು.

ಸುಮಾರು ವರ್ಷಗಳ ಕಾಲ ಪ್ರತಿಷ್ಠಿತ ಹಿಂದು ಪತ್ರಿಕೆಯಲ್ಲಿ ರೂರಲ್ ಅಫೇರ್ಸ್ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಪತ್ರಿಕೋದ್ಯಮ ಸೇರಿದಂತೆ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕøತರಾಗಿದ್ದರು.  ಮಾನವ ಹಕ್ಕುಗಳ ಪರ ಹೋರಾಟ ನಡೆಸಿದ್ದ ಅವರಿಗೆ ಪಿಯುಸಿಎಲ್ ಪ್ರಶಸ್ತಿಯು ಜೊತೆಗೆ ರಾಜಲಕ್ಷ್ಮಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ತಮ್ಮ ವೃತ್ತಿಯುದ್ದಕ್ಕೂ ಬಡತನ ನಿವಾರಣೆ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಕೃಷಿಗೆ ಒತ್ತು ನೀಡುವಂತೆ ಅನ್ನದಾತರಿಗೆ ಬರವಣೆಗಳ ಮೂಲಕ ಸಲಹೆ ಮಾಡುತ್ತಿದ್ದರು. ದೇಶದ ಅನೇಕ ಆಗುಹೋಗುಗಳಿಗೆ ಸಾಕ್ಷಿಯಾಗಿರುವ ಪಿ.ಸಾಯಿನಾಥ್, ಭಾರತೀಯ ಪತ್ರಿಕೋದ್ಯಮಕ್ಕೆ ಕಳಸಪ್ರಾಯರಾಗಿದ್ದಾರೆ.

Facebook Comments

Sri Raghav

Admin