ರೈತರು ಬೆಳೆದ ಉತ್ಪನ್ನಗಳಿಗೆ ಸರ್ಕಾರದ ಕನಿಷ್ಟ ಬೆಲೆ ನಿಗದಿ ಅತ್ಯಗತ್ಯ

ಈ ಸುದ್ದಿಯನ್ನು ಶೇರ್ ಮಾಡಿ

tuk

ತುರುವೇಕೆರೆ, ಅ.13- ರೈತರು ಬೆಳೆದ ಉತ್ಪನ್ನಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿ ನೇರ ಖರೀದಿ ಮಾಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಮೈಸೂರು ಮಾನಸಗಂಗೋತ್ರಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯ ನಿಕಟಪೂರ್ವ ನಿರ್ದೇಶಕ ಡಾ.ಹೆಚ್.ಎಂ.ರಾಜಶೇಖರ್ ಅಭಿಪ್ರಾಯಪಟ್ಟರು. ಮಾನವ ಹಕ್ಕುಗಳು ಮತ್ತು ರೈತರ ಆತ್ಮಹತ್ಯೆ ಎಂಬ ವಿಷಯ ಕುರಿತ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾರತ ಹಳ್ಳಿಗಳ ದೇಶ ಹೆಚ್ಚು ಕೃಷಿ ಅವಲಂಬಿತರಾಗಿದ್ದಾರೆ. ರೈತರು ಕೃಷಿಗಾಗಿ ಸಾಲದಲ್ಲಿ ಸಿಲುಕಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ರೈತರು ಅರ್ಥ ಮಾಡಿಕೊಳ್ಳಬೇಕಿದೆ. ಸಾಲವನ್ನು ಇಂದಲ್ಲ ನಾಳೆ ಕೊಡಬಹುದು ಆದರೆ ಜೀವ ಕೊಡಲು ಸಾಧ್ಯವಿಲ್ಲ. ಏನೇ ಕಷ್ಟ ಬಂದರು ಅತ್ಮಹತ್ಯೆಯಂತಹ ದುಡುಕು ನಿರ್ಧಾರ ಕೈಗೊಳ್ಳಬಾರದು ಎಂದರು. ದೇಶದಲ್ಲಿ ಸಾಲ ಪಡೆಯದವರು ಯಾರೂ ಇಲ್ಲ. ಉದ್ಯಮಿಗಳು ಕೋಟ್ಯಾಂತರ ರೂ ಸಾಲವನ್ನು ಮನ್ನಾ ಮಾಡಲಾಗಿದ್ದು, ಅದೇ ರೀತಿ ಸಣ್ಣ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕಿದೆ ಎಂದರು.
ರೈತರು ಶ್ರಮ ಜೀವಿಗಳು ಸರ್ಕಾರ ಆಧುನಿಕ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಬೇಕು ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಬೇಕು ಎಂದರಲ್ಲದೆ, ರೈತರಿಗಾಗಿಯೇ ಸ್ಥಾಪಿಸಿರುವ ಕೃಷಿ ಚಾನಲ್‍ನಲ್ಲಿ ಬರುವ ಕಾರ್ಯಕ್ರಮಗಳನ್ನು ವೀಕ್ಷಿಸಿ ಪ್ರಗತಿಪರ ರೈತರಾಗಲು ಸಹಕಾರಿಯಾಗಿದೆ ಎಂದು ಸಲಹೆ ನೀಡಿದರು. ಹಾವೇರಿ ಜಿಲ್ಲೆಯ ಬಂಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ .ಹೆಚ್.ಬಿ.ಪಂಚಾಕ್ಷರಯ್ಯ, ಪ್ರಾಂಶುಪಾಲ ಕೃಷ್ಣಪ್ಪ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಹೆಚ್.ಎಸ್. ಬಸವರಾಜು, ರೋಟರಿ ಕ್ಲಬ್ ಅಧ್ಯಕ್ಷ ಟಿ.ಲೋಕೇಶ್, ಹುಳಿಯಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಬಿ.ಆರ್. ಕೃಷ್ಣಮೂರ್ತಿ, ನಿರಂತರ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಅದ್ದೆ ಹಾಜರಿದ್ದರು.

Facebook Comments

Sri Raghav

Admin