ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲೆ ಚುನಾವಣೆ : ಸಚಿವ ಮಹದೇವಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

njg-hc1
ನಂಜನಗೂಡು, ಅ.13- ತಾಲ್ಲೂಕಿನ ದೇವನೂರು, ಮಲ್ಲನಮೂಲೆ, ಕಂತೆ ಮಾದಪ್ಪನ ಬೆಟ್ಟ, ಸುತ್ತೂರು ಗ್ರಾಮಗಳಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ ಯಾತ್ರಿ ಭವನ ನಿರ್ಮಾಣ ಮಾಡಲು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಗುದ್ದಲಿ ಪೂಜೆ ನೆರವೇರಿಸಿದರು. ತಾಲ್ಲೂಕಿನಾದ್ಯಂತ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರಿಭವನವು ಭಕ್ತರ ಮತ್ತು ಯಾತ್ರಾತ್ರಿಗಳ ಅನುಕೂಲಕ್ಕೆ ಉಪಯೋಗವಾಗುವಂತೆ ನಿರ್ಮಾಣ ಮಾಡಿ, ಇದರ ಉಸ್ತುವಾರಿಯನ್ನು ಸಂಬಂಧಪಟ್ಟವರಿಗೆ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮುಂದಿನ 2018 ಚುನಾವಣೆ ಸಿಎಂ ನೇತೃತ್ವದಲ್ಲೇ ನಡೆಯಲಿದ್ದು , ನಂಜನಗೂಡು ಮತ್ತು ಟಿ.ನರಸೀಪುರ ನನ್ನನ್ನು ರಾಜಕೀಯವಾಗಿ ಬೆಳೆಸಿದ ಮತ್ತು ನನ್ನ ಪ್ರೀತಿಗೆ ಪಾತ್ರರಾಗಿರುವ ಈ ಕ್ಷೇತ್ರಗಳ ಅಭಿವೃದ್ದಿ ಮಾಡುವುದರಿಂದ ನನಗೆ ತೃಪ್ತಿ ಸಿಗಲಿದೆ ಎಂದ ಅವರು, ಈ ಕ್ಷೇತ್ರಗಳ ಜನರ ಋಣ ತೀರಿಸಲು ಸಹಸ್ರಾರು ಕೋಟಿ ರೂ ಗಳನ್ನು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ಸಮಾರೋಪಾದಿಯಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿರುವುದನ್ನು ನೀವುಗಳೇ ಕಣ್ಣಾರೇ ನೋಡಬಹುದು. ನಂಜನಗೂಡು ತಾಲ್ಲೂಕಿನಲ್ಲಿ ಇನ್ನೂ ಐದಾರು ಮಠಗಳಿಗೆ ಮತ್ತು 33 ಸಮುಧಾಯ ಭವನಗಳಿಗೆ ಅನುದಾನವನ್ನು ಇಷ್ಠರಲ್ಲೆ ಬಿಡುಗಡೆ ಗೊಳಿಸಲಾಗುವುದು ಎಂದರು. ಇನ್ನೂ 35 ಕೋಟಿ ರೂ.ಗಳ ಅನುದಾನ ಈ ಕ್ಷೇತ್ರಕ್ಕೆ ಬಾಕಿ ಇದ್ದು, ಇಷ್ಟರಲ್ಲೆ ಆ ಹಣವನ್ನು ಬಿಡುಗಡೆ ಮಾಡಿ, ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರೈಸಲಾಗುವುದು ಎಂದರು. ಕ್ಷೇತ್ರದ ಬಹುದಿನಗಳ ಬೇಡಿಕೆಯಾದ ನುಗು ಏತ ನೀರಾವರಿ ಯೋಜನೆ ಚಾಲನೆ ನೀಡಲಾಗುವುದು. (ನ.1) 10 ಲಕ್ಷ ಜನ ಬಡ ಕುಟುಂಬಗಳಿಗೆ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸಲಾಗುವುದು. ಅಲ್ಲದೆ ದೇಶದಲ್ಲೇ ಮೊದಲ ಬಾರಿಗೆ ಎಪಿಎಲ್, ಬಿಪಿಎಲ್ ಕಾರ್ಡದಾರರಿಗೆ ಉಚಿತ ವೈದ್ಯಕೀಯ ತಪಾಸಣೆ. ನಡೆಸಲಾಗುವುದು. ಇದಕ್ಕಾಗಿ 4300 ತಜ್ಞ ವೈದ್ಯರು ಸಿದ್ದರಿದ್ದಾರೆ ಎಂದರು.
ಶಾಸಕ ಕಳಲೆ ಕೇಶವಮೂರ್ತಿರವರು ಮಾತನಾಡಿ, ನಂಜನಗೂಡು ಕ್ಷೇತ್ರಾದ್ಯಾಂತ ಅಭಿವೃದ್ದಿ ಕಾಮಗಾರಿಗಳು ಯಶಸ್ವಿಯಾಗಿ ನಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಸ್ತುವಾರಿ ಸಚಿವ ಡಾ.ಹೆಚ್.ಸಿ,ಮಹದೇವಪ್ಪ, ಸಂಸದ ಆರ್.ಧ್ರುವನಾರಯಣ್‍ರವರ ಇಚ್ಚಾಶಕ್ತಿಯಿಂದ ಸಾಧ್ಯವಾಯಿತು. ಇನ್ನೂ ಕೆಲವೇ ದಿನಗಳಲ್ಲಿ ನಂಜನಗೂಡು ಮಾದರಿ ಕ್ಷೇತ್ರವಾಗಿ ಪರಿವರ್ತನೆಯಾಗಲಿದೆ ಎಂದರು.
ಟಿ. ನರಸೀಪುರ ಆಶ್ರಯ ಸಮಿತಿ ಅಧ್ಯಕ್ಷ ಸುನೀಲ್ ಬೋಸ್, ತಾಪಂ ಅಧ್ಯಕ್ಷ ಬಿ.ಎಸ್. ಮಹಾದೇವಪ್ಪ. ಉಪಾದ್ಯಕ್ಷ ಗೋವಿಂದರಾಜನ್, ಜಿಪಂ ಸದಸ್ಯೆ ಲತಾ ಸಿದ್ದಶೆಟ್ಟಿ. ಸ್ಥಾಯಿಸಮಿತಿ ಅಧ್ಯಕ್ಷ ಶಿವಣ್ಣ, ಎಪಿಎಂಸಿ ಅಧ್ಯಕ್ಷ ಮಾದಪ್ಪ, ವೀರಶೈವ ಮಹಾಸಭಾದ ಅಧ್ಯಕ್ಷ ಹಗಿನವಾಳು ಚೆನ್ನಪ್ಪ ಸೇರಿದಂತೆ ಹಲವಾರು ಮುಖಂಡರು, ವಿವಿಧ ಇಲಾಖೆಯ ಸದಸ್ಯರು ಇದ್ದರು.

Facebook Comments