ಹಾರರ್ ಚಿತ್ರ ನೋಡಿ ರಕ್ತಕಾರಿಕೊಂಡು ಬಿದ್ದು ಒದ್ದಾಡಿದ ಪ್ರೇಕ್ಷಕ..! (ವಿಡಿಯೋ )

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.13- ಗಾಯತ್ರಿ ಚಲನಚಿತ್ರದ ಹಾರರ್ ದೃಶ್ಯ ನೋಡಿ ಪ್ರೇಕ್ಷಕನೊಬ್ಬ ರಕ್ತವಾಂತಿ ಮಾಡಿಕೊಂಡು ನೆಲದಲ್ಲಿ ಬಿದು ಒದ್ದಾಡಿದ ಘಟನೆ ಮೇನಕ ಚಿತ್ರಮಂದಿರದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಪ್ರದರ್ಶನಗೊಳ್ಳುತ್ತಿದ್ದ ಗಾಯತ್ರಿ ಸಿನಿಮಾ ವೀಕ್ಷಣೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬ ಚಲನಚಿತ್ರದಲ್ಲಿ ಬರುವ ಹಾರರ್ ದೃಶ್ಯವನ್ನು ನೋಡಿ ಬೆಚ್ಚಿಬಿದ್ದಿದ್ದು, ಅಲ್ಲಿಯೇ ರಕ್ತವಾಂತಿ ಮಾಡಿಕೊಂಡಿದ್ದಾನೆ.

ಕೂಡಲೇ ಆತನನ್ನು ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಚಿತ್ರದ ಪ್ರಚಾರಕ್ಕಾಗಿ ಗಿಮಿಕ್ ಮಾಡಲಾಗಿದೆ ಎಂಬ ಊಹಾಪೋಹ  ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

Facebook Comments

Sri Raghav

Admin