ಅತ್ಯಾಚಾರದ ದೃಶ್ಯವನ್ನು ಫೇಸ್ಬುಕ್ ಗೆ ಅಪ್‍ಲೋಡ್ ಮಾಡಿದ ಯುವಕ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arrested-Man

ಕೊಳ್ಳೆಗಾಲ,ಅ.14- ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ನಡೆಸಿ ಕೃತ್ಯವನ್ನು ಫೋಟೊ ತೆಗೆದು ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿದ ಕಾರ್ತಿಕ್(22) ಎಂಬ ಯುವಕನನ್ನು ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ. ತಾಲ್ಲೂಕಿನ ಸತ್ಯಗಾಲ ಸಮೀಪದ ಟಿಟಿದೊಡ್ಡಿ ಗ್ರಾಮದ ನಿವಾಸಿ ಕಾರ್ತಿಕ್ ತನ್ನ ಪಕ್ಕದ ಮನೆಯಲ್ಲಿದ್ದ 15 ವರ್ಷದ ಬಾಲಕಿಯನ್ನು ಕಳೆದ ಮೇ 25ರಂದು ಪುಸಲಾಯಿಸಿ ಕರೆದೊಯ್ದಿದ್ದ . ಕರೆದೊಯ್ದು 5 ದಿನಗಳ ನಂತರ ಇಬ್ಬರ ಪೋಷಕರು ಅವರನ್ನು ಪತ್ತೆ ಹಚ್ಚಿ ಕರೆ ತಂದಿದ್ದರು. ಎರಡೂ ಮನೆಯವರು ಮಕ್ಕಳಿಗೆ ಬುದ್ದಿ ಹೇಳಿ ಸುಮ್ಮನಾಗಿದ್ದರು.

ಇದಾದ ಬಳಿಕ ಕಾರ್ತಿಕ್ ತಾನು ಕರೆದೊಯ್ದಾಗ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ವೇಳೆ ತೆಗೆದುಕೊಂಡಿದ್ದ ವಿಡಿಯೋ ದೃಶ್ಯಗಳನ್ನು ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿದ್ದ.  ಇದರಿಂದ ಆಘಾತಕ್ಕೊಳಗಾದ ಬಾಲಕಿಯ ಪೋಷಕರು ನಿನ್ನೆ ಸತ್ಯಗಾಲ ಪೊಲೀಸರಿಗೆ ದೂರು ನೀಡಿದ್ದು , ಪೊಲೀಸರು ಕ್ರಮ ಕೈಗೊಂಡು ತನಿಖೆ ಮುಂದುವರೆಸಿದ್ದಾರೆ.

Facebook Comments

Sri Raghav

Admin