ಅಭಿಮಾನಿ ಮುದ್ರಣ ಘಟಕಕ್ಕೂ ನುಗ್ಗಿದ ಮಳೆ ನೀರು

ಈ ಸುದ್ದಿಯನ್ನು ಶೇರ್ ಮಾಡಿ

Abhimaani

ಬೆಂಗಳೂರು, ಅ.14- ನಿನ್ನೆ ಸುರಿದ ಭಾರೀ ಮಳೆಗೆ ಅಭಿಮಾನಿ ಪಬ್ಲಿಕೇಷನ್ ನೆಲಮಹಡಿಗೆ ನೀರು ನುಗ್ಗಿ ಕೋಟ್ಯಂತರ ಮೌಲ್ಯದ ಯಂತ್ರೋಪಕರಣಗಳು, ಪಠ್ಯ ಪುಸ್ತಕ ಮುದ್ರಣ ಸಾಮಗ್ರಿಗಳು ನಾಶವಾಗಿವೆ. ನಿನ್ನೆ ಸಂಜೆ ಸುರಿದ ಸತತ ಮಳೆಗೆ ರಾಜಾಜಿನಗರದಲ್ಲಿರುವ ಅಭಿಮಾನಿ ಪಬ್ಲಿಕೇಷನ್‍ಗೆ ಭಾರೀ ಪ್ರಮಾಣದ ನೀರು ನುಗ್ಗಿದ ಪರಿಣಾಮ ಭಾರೀ ಮೌಲ್ಯದ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನೀರನ್ನು ಹೊರಹಾಕಿದ್ದಾರೆ. ಏಕಾಏಕಿ ನೀರು ನುಗ್ಗಿದ ಪರಿಣಾಮ ಮುದ್ರಣ ಸಾಮಗ್ರಿಗಳು ಕೂಡ ನಾಶವಾಗಿವೆ. ಈ ಸಂಬಂಧ ಬಿಬಿಎಂಪಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

Abhimaani--01

Abhimaani--02

Abhimaani--03

Abhimaani--04

Abhimaani--05

Abhimaani--06

Abhimaani--07

Abhimaani--08

 

Facebook Comments

Sri Raghav

Admin