ಅಮಾನಿ ಬೈರಸಾಗರ ಕೆರೆಗೆ ಬಾಗೀನ ಅರ್ಪಿಸಿದ ಶಾಸಕ ಸುಬ್ಬಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

gudibande
ಗುಡಿಬಂಡೆ, ಅ.14- ತಾಲೂಕಿನ ಜೀವನಾಡಿ ಅಮಾನಿ ಬೈರಸಾಗರ ಕೆರೆ ಸುಮಾರು ವರ್ಷಗಳ ನಂತರ ಕೋಡಿ ಹರಿದಿದ್ದು, ಗುಡಿಬಂಡೆ ಜನತೆಯಲ್ಲಿ ಸಂತಸ ತಂದಿದ್ದು, ರೈತರ ಮೋಗದಲ್ಲಿ ಮಂದಹಾಸ ಮೂಡಿದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಕೆರೆಗೆ ಬಾಗೀನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಮಳೆಯ ಅಭಾವದಿಂದ ಈ ಭಾಗದ ಜನತೆ ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ ಈ ಬಾರಿ ಆ ದೇವರ ಕೃಪೆಯಿಂದಾಗಿ ಉತ್ತಮ ಮಳೆಯಾಗಿದ್ದು, ಬಹುತೇಕ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ಸುಮಾರು ಮೂರು ಸಾವಿರ ಎಕರೆ ಪ್ರದೇಶಕ್ಕೆ ಅಮಾನಿ ಬೈರಸಾಗರ ಕೆರೆ ನೀರನ್ನು ಒದಗಿಸುತ್ತದೆ. ಅದರಂತೆ ಜಿಲ್ಲಾಧಿಕಾರಿಗಳೊಂದಿಗೆ ಶೀಘ್ರವೇ ಮಾತನಾಡಿ ಭತ್ತ ಬೆಳೆಗೆ ನೀರು ಬೀಡುವಂತೆ ಮನವಿ ಮಾಡಲಾಗುವುದು ಎಂದರು. ತಾಪಂ ಅಧ್ಯಕ್ಷೆ ವರಲಕ್ಷ್ಮೀ, ಪಪಂ ಅಧ್ಯಕ್ಷ ಚಂದ್ರಶೇಖರನಾಯ್ಡು, ಉಪಾಧ್ಯಕ್ಷೆ ವೆಂಕಲಕ್ಷ್ಮಮ್ಮ, ಸದಸ್ಯರಾದ ದ್ವಾರಕನಾಥನಾಯ್ದು, ಎಂ.ಎನ್ ರಾಜಣ್ಣ, ರಮೇಶ್, ರಿಯಾಜ್, ಲಕ್ಷ್ಮೀಕಾಂತಮ್ಮ, ತಹಸೀಲ್ದಾರ್ ಸಿಗ್ಬತ್ತುಲ್ಲಾ, ಮುಖ್ಯಾಧಿಕಾರಿ ನಾಗರಾಜ, ಮುಖಂಡರಾದ ಹೆಚ್.ನರಸಿಂಹರೆಡ್ಡಿ, ಕೃಷ್ಣೇಗೌಡ, ಪಾವಜೇನಹಳ್ಳಿ ನಾಗರಾಜ್, ಅನಂತ್, ಚಾಂದ್‍ಬಾಷ, ಮುನ್ನಾ, ಬಾಬು, ವೇಣುಗೋಪಾಲ್, ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

Facebook Comments