ಕಲುಷಿತ ಆಹಾರ ಸೇವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Students--02

ಮಿಜರ್ ಪುರ್, ಅ.14-ಕಲುಷಿತ ಆಹಾರ ಸೇವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶದ ಮಿಜರ್ಪುರ್ ಜಿಲ್ಲೆಯಲ್ಲಿ ನಿನ್ನೆ ಸಂಭವಿಸಿದೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.  ಮಿಜರ್ಪುರ್ ಜಿಲ್ಲೆಯ ವಿಂಧ್ಯಾಂಚಲ್‍ನ ಪರ್ಸಿಯಾ ಧುವಾ ಗ್ರಾಮದ ಶಾಲೆಯಲ್ಲಿ ನಿನ್ನೆ ಮಧ್ಯಾಹ್ನ ಭೋಜನ ಸೇವಿಸಿದ ನಂತರ ವಿದ್ಯಾರ್ಥಿಗಳು ಹೊಟ್ಟೆ ನೋವು ಮತ್ತು ವಾಂತಿ-ಬೇಧಿಯಿಂದ ಅಸ್ವಸ್ಥರಾದರು. ತಕ್ಷಣ ಅವರನ್ನು ಇಲ್ಲಿನ ವಿಂಧ್ಯಾಚಲ್ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಇವರಲ್ಲಿ 45 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಮಧ್ಯಾಹ್ನದ ಆಹಾರ ಸೇವಿಸಿದ ಕೆಲವರು ಉದರ ಬೇನೆ, ವಾಂತಿ ಮತ್ತು ಬೇಧಿಯಿಂದ ಬಳಲಿದರು. ನಾವು ಆಹಾರವನ್ನು ಪರಿಶೀಲಿಸಿದಾಗ ಅದರಲ್ಲಿ ಸತ್ತ ಹಲ್ಲಿಯೊಂದರ ಬಾಲ ಇರುವುದು ಕಂಡು ಬಂದಿತು. ಆಹಾರ ಕಲುಷಿತಗೊಳ್ಳಲು ಇದೇ ಕಾರಣ ಇರಬಹುದು ಎಂದು ಶಾಲೆಯ ಮುಖ್ಯೋಪಾಧ್ಯಾಯ ಜೈ ಸಿಂಗ್ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಸ್ಥಳೀಯ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin