ಭಾರೀ ಮಳೆ : ಮನೆಗಳ ಛಾವಣಿ ಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.14- ರಾತ್ರಿ ಸುರಿದ ಭಾರೀ ಮಳೆಗೆ ಎರಡು ಮನೆಗಳ ಛಾವಣಿ ಕುಸಿದು ಬಿದ್ದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ನಷ್ಟ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳನಾಯಕನಹಳ್ಳಿಯಲ್ಲಿ ಎರಡು ಮನೆಗಳ ಛಾವಣಿ ಕುಸಿದ ಪರಿಣಾಮ ಆಹಾರ ಪದಾರ್ಥಗಳು, ಬಟ್ಟೆ, ಪಾತ್ರೆ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿವೆ. ಈರಲಿಂಗಯ್ಯ ಮತ್ತು ಆದಿಶೇಷಯ್ಯ ಎಂಬುವರ ಮನೆಯಲ್ಲಿ ಈ ಅವಾಂತರ ನಡೆದಿದೆ. ಸುದ್ದಿ ತಿಳಿದ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರದ ಭರವಸೆ ನೀಡಿದ್ದಾರೆ. ಈ ಸಂಬಂಧ ವೈ.ಎನ್.ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments