ಎಟಿಎಂನಲ್ಲಿ ನೋಟಿನ ಬದಲು ಬಂತು ಪೇಪರ್, ಹಣ ಡ್ರಾ ಮಾಡಿದವನಿಗೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ATM-01

ಬಳ್ಳಾರಿ, ಅ.15- ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾದ ಎಟಿಎಂವೊಂದರಲ್ಲಿ ಹಣದ ಜತೆಗೆ ಖಾಲಿ ಕಾಗದ ಬಂದಿದ್ದು, ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ಯಾಂಕ್ ಬಂಡ್ ರಸ್ತೆಯ ಎಸ್‍ಬಿಐನ ಎಟಿಎಂನಲ್ಲಿ ಆರ್.ರಮೇಶ್ ಎಂಬುವರು 8ಸಾವಿರ ಹಣ ಡ್ರಾ ಮಾಡಿದ್ದಾರೆ. 500ರೂ. ಮುಖ ಬೆಲೆಯ ನೋಟುಗಳಲ್ಲಿ ಒಂದು ಖಾಲಿ ಪೇಪರ್ ಬಂದಿದ್ದು ಹಣ ಡ್ರಾ ಮಾಡಿದ ರಮೇಶ್ಅ ಕಂಗಾಲಾಗಿದ್ದಾರೆ. ಈ ಕುರಿತು ಸ್ಥಳೀಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಬಾರದೇ ಇದ್ದುದ್ದರಿಂದ ಬ್ಯಾಂಕ್ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin