ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಸಂಪರ್ಕ ಜಾಲ ಪತ್ತೆ, 3 ಉಗ್ರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Kashmir--01

ಶ್ರೀನಗರ, ಅ.16-ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರನ್ನು ಹೊಡೆದುರುಳಿಸುತ್ತಿರುವ ಭದ್ರತಾ ಪಡೆಗಳು, ಇನ್ನೊಂದೆಡೆ ಉಗ್ರರ ವ್ಯವಸ್ಥಿತ ಸಂಪರ್ಕ ಜಾಲವನ್ನು ಭೇದಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಂ ಜಿಲ್ಲೆಯಲ್ಲಿ ಮೂವರು ಉಗ್ರಗಾಮಿಗಳನ್ನು ಬಂಧಿಸಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ಕಳದ ಮೂರು ದಿನಗಳ ಅವಧಿಯಲ್ಲಿ ನಿಷೇಧಿತ ಲಷ್ಕರ್-ಇ-ತೈಬಾ (ಎಲ್‍ಇಟಿ) ಸಂಘಟನೆಯ ಇಬ್ಬರು ಹಾಗೂ ಹಿಜ್ಬಲ್ ಮುಜಾಹಿದ್ದೀನ್ (ಎಚ್‍ಎಂ) ಉಗ್ರ ಬಣದ ಒಬ್ಬನನ್ನು ಬಂಧಿಸಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮಹಾ ನಿರೀಕ್ಷಕ ಮುನೀರ್ ಖಾನ್ ತಿಳಿಸಿದ್ದಾರೆ.

ಈ ಮೂವರ ಬಂಧನದೊಂದಿಗೆ ಈ ಪ್ರದೇಶದಲ್ಲಿ ಉಗ್ರರ ಸಂಪರ್ಕ ಜಾಲವನ್ನು ಕಡಿತಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಮತ್ತಷ್ಟು ವಿಚಾರಣೆಯಿಂದ ಅನೇಕ ಮಾಹಿತಿಗಳು ಬೆಳಕಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin