ಕುಸಿದು ಬಿದ್ದ ಲಾರಿ: ಪಡಿತರ ಅಕ್ಕಿ ನೀರು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

K-R-Pete
ಕೆ.ಆರ್.ಪೇಟೆ, ಅ.16- ಶಿಥಿಲಗೊಂಡು ಸೇತುವೆ ಮುರಿದು ಬಿದ್ದ ಪರಿಣಾಮ ಪಡಿತರ ಸರಬರಾಜು ಲಾರಿಯೊಂದು ನೀರಿನಲ್ಲಿ ಸಿಲುಕಿ ಸುಮಾರು 15 ಚೀಲ ಅಕ್ಕಿ ಮೂಟೆಗಳು ನೀರಿನಲ್ಲಿ ತೋಯ್ದು 25 ಸಾವಿರ ನಷ್ಟ ಉಂಟಾಗಿರುವ ಘಟನೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿ ನಾಯಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬಳಿ ನಡೆದಿದೆ. ನಾಯಕನಹಳ್ಳಿ ಗ್ರಾಮದ ನ್ಯಾಯ ಬೆಲೆ ಅಂಗಡಿಗೆ ಪಡಿತರ ಅಕ್ಕಿ ಮೂಟೆಗಳನ್ನು ಟಿಎಪಿಸಿಎಂಎಸ್ ಸಂಸ್ಥೆಗೆ ಸೇರಿದ ಲಾರಿಯು 100 ಮೂಟೆ ಅಕ್ಕಿ ಚೀಲಗಳನ್ನು ತುಂಬಿಕೊಂಡು ಹೋಗುತ್ತಿತ್ತು.

ಈ ಸಂದರ್ಭದಲ್ಲಿ ಮಳೆ ಸುರಿದಿದ್ದ ಕಾರಣ ಸಂಪರ್ಕ ಸೇತುವೆಯ ಮೇಲೆ ನೀರು ಹರಿಯುತ್ತಿತ್ತು ಅಲ್ಲದೆ ಮೊದಲೇ ಸೇತುವೆಯಲ್ಲಿ ಬಿರುಕು ಬಿಟ್ಟಿದ್ದರಿಂದ ಲಾರಿ ಚಾಲಕನಿಗೆ ಗೊತ್ತಿಲ್ಲದೆ ಇದೇ ಮಾರ್ಗವಾಗಿ ಲಾರಿಯು ಅಧಿಕ ಭಾರ ಹೊತ್ತು ಸಾಗಿದ್ದರಿಂದ ಚಲಿಸಿದ ಕಾರಣ ಲಾರಿಯ ಭಾರಕ್ಕೆ ಸೇತುವೆಯೇ ಲಾರಿ ಸಮೇತ ಕುಸಿದು ಬಿದ್ದು ಹೊಂಡಕ್ಕೆ ಸಿಲುಕಿತು. ಆದರೆ ಲಾರಿಯು ಮಗುಚಿ ಬೀಳುವುದು ಸ್ವಲ್ಪದರಲ್ಲೇ ತಪ್ಪಿತು. ಲಾರಿಯು ಓರೆಯಾಗಿ ನೀರಿನಲ್ಲಿ ಹೂತುಕೊಂಡ ಕಾರಣ ಲಾರಿಯೊಳಗಿದ್ದ 100 ಚೀಲ ಅಕ್ಕಿಮೂಟೆಗಳ ಪೈಕಿ 15 ಮೂಟೆ ಅಕ್ಕಿ ನೀರಿನಲ್ಲಿ ತೊಯ್ದು ಹಾಳಾಗಿದೆ. ಉಳಿದ ಅಕ್ಕಿ ಮೂಟೆಗಳನ್ನು ಮತ್ತೊಂದು ಲಾರಿಯಲ್ಲಿ ಸುರಕ್ಷಿತವಾಗಿ ಬೇರೆ ವಾಹನದಲ್ಲಿ ಸಾಗಿಸಲಾಯಿತು. ಕ್ರೇನ್ ಮೂಲಕ ಲಾರಿಯನ್ನು ಹೊರ ತೆಗೆಯಲಾಯಿತು. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂದು ತಹಸೀಲ್ದಾರ್ ಕೆ.ರತ್ನ ಅವರು ಮಾಹಿತಿ ನೀಡಿದ್ದಾರೆ.

Facebook Comments

Sri Raghav

Admin