ಕೊನೆಗೂ ಚಳ್ಳಕೆರೆಯಲ್ಲಿ ಸಿದ್ಧವಾಯ್ತು ಸುಸಜ್ಜಿತ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ

ಈ ಸುದ್ದಿಯನ್ನು ಶೇರ್ ಮಾಡಿ

challakere-1
ಚಳ್ಳಕೆರೆ, ಅ.16-ತಾಲ್ಲೂಕಿನ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸುಸಜ್ಜಿತವಾಗಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ನಗರದ ಹೃದಯ ಭಾಗದಲ್ಲಿರುವ ಬೆಂಗಳೂರು ರಸ್ತೆಯ ಹಳೆ ಸಂತೆ ಮೈದಾನದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ.ದಾವಣಗೆರೆ ವಿಭಾಗದಲ್ಲಿ ಅತ್ಯಂತ ನವೀನ ಮಾದರಿಯ ಹಾಗೂ ವಿಶೇಷ ವಿನ್ಯಾಸದಿಂದ ಇದನ್ನು ನಿರ್ಮಿಸಲಾಗಿದೆ. ಚಳ್ಳಕೆರೆಯಿಂದ ಆಂಧ್ರಪ್ರದೇಶ, ಬಳ್ಳಾರಿ, ದಾವಣಗೆರೆ, ಹಾಗೂ ಬೆಂಗಳೂರು ಕಡೆಗೆ ಹೋಗುವ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಬಿಸಿಲು ಮಳೆಯೆನ್ನದೆ ಫುಟ್‍ಪಾತ್ ರಸ್ತೆಯಲ್ಲಿ ಕಾಯುತ್ತಿದ್ದ ಕಾಯಕಕ್ಕೆ ಮುಕ್ತಿ ದೊರಕಿದೆ. ಹಲವಾರು ವರ್ಷಗಳಿಂದ ವಿವಿಧ ಸಂಘ-ಸಂಸ್ಥೆಗಳು, ಹೋರಾಟಗಾರರು,ಮುಖಂಡರು ಸೇರಿದಂತೆ, ಅನೇಕ ಜನರ ಹೋರಾಟದ ಪ್ರತಿಫಲವಾಗಿ ಹಾಗೂ ಸ್ಥಳೀಯ ಶಾಸಕ ಟಿ.ರಘಮೂರ್ತಿ ಅವರು ಕಾಳಜಿ ವಹಿಸಿ ಸುಮಾರು, 8.ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿರುವುದು ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಿದೆ.

ಬೃಹತ್ ವಿಸ್ತೀರ್ಣದಲ್ಲಿ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ನಿಲ್ದಾಣದಲ್ಲಿ ಮೂವತ್ತಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಮಹಿಳಾ ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಹೋಟೆಲ್, ಶೌಚಾಲಯ, ಪುಸ್ತಕ ಮಳಿಗೆ, ಹಣ್ಣು-ಹೂವಿನ ಮಳಿಗೆ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸೇರಿದಂತೆ,ಹಲವು ಸೌಲಭ್ಯಗಳನ್ನು ಹೊಂದಿದೆ. ಈಗಾಗಲೇ ಬಹುತೇಕ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು, ನಿಲ್ದಾಣದಲ್ಲಿನ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಸಣ್ಣ ಪುಟ್ಟ ಕಾಂಕ್ರೀಟ್ ಕೆಲಸ ಬಾಕಿ ಇದ್ದು, ಇನ್ನೆರಡು ವಾರದಲ್ಲಿ ಮುಗಿಯುವ ಸಾಧ್ಯತೆಯಿದೆ. ಇತ್ತೀಚೆಗೆ ದಾವಣಗೆರೆ ವಿಭಾಗೀಯ ಅಧಿಕಾರಿಗಳು ಭೇಟಿ ನೀಡಿ ಅಂತಿಮ ಕಾಮಗಾರಿಗಳನ್ನು ವೀಕ್ಷಣೆ ಮಾಡಲಾಗಿದ್ದು, ಮಂತ್ರಿಗಳು, ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತಿಂಗಳಲ್ಲಿ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ ಎಂದು ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin