ಗಜೇಂದ್ರಗಡದಲ್ಲಿ ಮಳೆಯಿಂದ ಮನೆ ಕುಸಿದು ಅಜ್ಜಿ-ಇಬ್ಬರು ಮೊಮ್ಮಕ್ಕಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Gajendraghada--02

ಗದಗ. ಅ.16 : ಮಳೆ ಅವತಾರದಿಂದ ಮನೆ ಕುಸಿದು ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನೆಡೆದೆ. ಗಜೇಂದ್ರಗಡ ಪಟ್ಟಣದ ಗಂಜಿಪೇಟೆನಲ್ಲಿ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದೆ. 56 ವರ್ಷದ ಮೇಹಬೂಬಿ, 8 ವರ್ಷದ ಬಾಲಕ ಮುಸ್ಕಾನ್, 10 ನಾಜಿಯಾ ಸಳದಲ್ಲೆ ಮೃತಪಟ್ಟಿದ್ದಾರೆ. ಮನೆಯಲ್ಲಿ ಒಟ್ಟು ಐದು ಜನ ವಾಸ ಮಾಡುತ್ತಿದ್ದರು. ಅಜ್ಜಿ ಇಬ್ಬರು ಗಂಡು ಮಕ್ಕಳು ಸಹ ಅದೇ ಮನೆಯಲ್ಲಿದ್ದರು. ಆದ್ರೆ ಅವರು ಬೇರೆ ಕೊಣೆಯಲ್ಲಿ ಮಲಗಿದ್ದರಿಂದ ಅದೃಷ್ಟವಶಾತ್ ಅವರು ಬದುಕಿ ಉಳಿದಿದ್ದಾರೆ .

ಮನೆ ಕುಸಿತದಿಂದ ಸ್ಥಳಿಯರು ಭಯಬೀತಗೊಂಡು ಆಚೆ ಬರುವಷ್ಟರಲ್ಲಿ ಮೂವರು ಸಾವನ್ನಪ್ಪಿದ್ದರು. ನಂತರ ಸ್ಥಳಿಯರು, ಅಗ್ನಿ ಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ಸಹಾಯದಿಂದ ಈಗ ಮೂವರ ಮೃತ ದೇಹವನ್ನು ಹೊರ ತೆಗೆಯಲಾಗಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಮಳೆರಾಯ ಜವರಾಯ ನಂತೆ ಬಂದು ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳ ಜೀವ ತಗೆದುಕೊಂಡಿರುವುದು ದುರದೃಷ್ಟಕರ ಸಂಗತಿ. ಸತರ 15 ದಿನಗಳಿಂದ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು ಈಗ ಮಳೆಗಾಗಿ ಹಿಡಿಶಾಪ ಹಾಕುವಂತಾಗಿದೆ.

Facebook Comments

Sri Raghav

Admin