ಗುಂಡು ಹಾರಿಸಿ ಪತ್ನಿ ಕೊಲೆ : ಪತಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Gun-Shoot
ಅರಸೀಕೆರೆ, ಅ.16-ಪಾನಮತ್ತನಾಗಿ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ಮದ್ಯದ ಅಮಲಿನಲಿದ್ದ ಗಂಡ ಬಂದೂಕಿನಿಂದ ಪತ್ನಿಯನ್ನು ಗುಂಡು ಹಾರಿಸಿ ಕೊಲೆ ಮಾಡಿ ತಲೆಮರೆಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಬಾಣಾವರ ಹೋಬಳಿಯ ವಾಲೇಹಳ್ಳಿ ಗ್ರಾಮದ ಕುಮಾರ್(34) ಪತ್ನಿ ಲಾವಣ್ಯಳನ್ನು ಕೊಲೆಗೈದು ಈಗ ಪೋಲಿಸರ ಅತಿಥಿಯಾಗಿದ್ದಾನೆ. ಕೊಲೆಗೆ ಕಾರಣ ನಿಖರವಾಗಿ ತಿಳಿದು ಬಂದಿಲ್ಲವಾದರೂ ಪತ್ನಿಯ ಶೀಲವನ್ನು ಶಂಕಿಸಿ ಹತ್ಯೆ ಮಾಡಿರಬಹುದೆಂದು ಪೋಲಿಸರ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ಪಿ ವಿ.ಎಂ.ಜ್ಯೋತಿ, ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ್, ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್, ಬಾಣಾವರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರಥನ್‍ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಪ್ರಗತಿಯಲ್ಲಿದೆ. ಮೃತ ಲಾವಣ್ಯಳ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯಲ್ಲಿ ನಡೆಸಲು ಶವವನ್ನು ಕಳುಹಿಸಿಕೊಡಲಾಗಿದೆ. ಹತ್ಯೆಗೆ ಬಳಸಲಾದ ಎಸ್‍ಬಿಬಿಎಲ್ ಬಂದೂಕನ್ನುಪೊಲೀಸರು ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin