ಪ್ರಜಾಪ್ರಭುತ್ವಕ್ಕೆ ಸೆಡ್ಡು ಹೊಡೆದ ಸುಡುಗಾಡು ಸಿದ್ಧರು

ಈ ಸುದ್ದಿಯನ್ನು ಶೇರ್ ಮಾಡಿ

Siddaru--01

ಚಿಕ್ಕನಾಯಕನಹಳ್ಳಿ,ಅ.16- ಆಶ್ರಯ ನೀಡುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸದ ಪ್ರಭುತ್ವದ ವಿರುದ್ಧ ತಿರುಗಿ ಬಿದ್ದಿರುವ ಸುಡುಗಾಡು ಸಿದ್ಧರ ಕುಟುಂಬ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬೀಡು ಬಿಟ್ಟು ಪ್ರತಿಭಟನೆಗೆ ಇಳಿದಿದೆ. ಪಟ್ಟಣದ ಕೇದಿಗೆಹಳ್ಳಿ ಗುಂಡು ತೋಪಿ ನಲ್ಲಿ ಕಳೆದ ಎರಡು ದಶಕಗಳಿಂದ 35 ಕುಟುಂಬ ನೆಲೆಸಿದೆ. ಹಲವಾರು ಬಾರಿ ಸೂರು ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಇತ್ತೀಚೆಗೆ ಬಿದ್ದ ಮಳೆಯ ಆರ್ಭಟಕ್ಕೆ ಅವರು ವಾಸಿಸುತ್ತಿದ್ದ ಗುಡಿಸಲುಗಳು ನೀರಿನಿಂದ ತುಂಬಿ ಹೋಗಿದೆ. ಹೀಗಾಗಿ ಅನಿವಾರ್ಯವಾಗಿ ಅವರಿಗೆ ಪರ್ಯಾಯ ಸೂರಿನ ಅಗತ್ಯವಿದೆ.

ಈ ಕುರಿತಂತೆ ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡಕ್ಕೆ ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿರುವ ಸುಡುಗಾಡು ಸಿದ್ಧರು ನಮಗೆ ಸೂರು ದೊರೆಯುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನಮ್ಮದು ಗುಡಿಸಲು. ಮಳೆ ಬಂದಾಗ ಒಂದು ಕಡೆ ಇರಲು ಸಾಧ್ಯವಾಗುವುದಿಲ್ಲ, ಮಳೆಯ ಅವಾಂತರಕ್ಕೆ ನಾವು ನಲುಗು ವುದಲ್ಲದೆ ನನ್ನ ಪುಸ್ತಕ, ನೋಟ್‍ಬುಕ್ ಎಲ್ಲವೂ ನೆನೆಯುತ್ತದೆ ಇದರಿಂದ ಓದು, ಬರಹ ಇಲ್ಲವಾಗಿ ಶಾಲೆಯಲ್ಲಿ ಟೀಚರ್‍ರಿಂದ ಬೈಯಿಸಿಕೊಳ್ಳಬೇಕಾಗುತ್ತದೆ. ಜೊತೆಗೆ ನಾನೊಬ್ಬಳು ಅನಾಥೆ, ತಂದೆ-ತಾಯಿ ಇಬ್ಬರೂ ಇಲ್ಲ. ಈ ಗುಂಪಿನೊಂದಿಗೆ ಸೇರಿಕೊಂಡು ಜೀವನ ಕಳೆಯುತ್ತಿ ದ್ದೇನೆ ಇಲ್ಲಿಯೂ ನಿಲ್ಲಲು ನನಗೆ ನೆಲೆಯಿಲ್ಲ ದಿದ್ದರೆ ಬದುಕುವುದು ಹೇಗೆ ಎಂದು ಅಲವತ್ತು ಕೊಂಡಿದ್ದಾಳೆ ವಿದ್ಯಾರ್ಥಿನಿ ಲಕ್ಷ್ಮಿದೇವಿ.

ಸುಡುಗಾಡ ಸಿದ್ದರಿಗೆ ನಿವೇಶನ ನೀಡಲು ಡಿ.ಸಿ.ಕಛೇರಿಯಿಂದ ನಿರ್ದೇಶನ ಬಂದಿದೆ, ಈ ಸಂಬಂಧ ಅವರಿಂದ ಅರ್ಜಿಗಳನ್ನು ತರಿಸಿಕೊಳ್ಳಲಾಗಿದೆ, ಆದಷ್ಟು ಶೀಘ್ರ ಸ್ಥಳಕ್ಕೆ ಆರ್.ಐ. ಮತ್ತು ಸರ್ವೆಯರ್ ಕಳುಹಿಸಿ ದಾಖಲೆ ಸಿದ್ದಪಡಿಸಿ ಇವರ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳತ್ತೇನೆ ಎಂದಿದ್ದಾರೆ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಶಿವಲಿಂಗಮೂರ್ತಿ. ಚಿಕ್ಕನಾಯಕನಹಳ್ಳಿಯ ಅಲೆಮಾರಿ ಪಂಗಡವಾದ ಸುಡುಗಾಡು ಸಿದ್ದರಿಗೆ ನಿವೇಶನ ಒದಗಿಸಲು ಜಿಲ್ಲಾಡಳಿತ ದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರಿಗೆ ಶೀಘ್ರ ನಿವೇಶನ ಒದಗಿಸಿದರೆ ನಮ್ಮ ವತಿಯಿಂದ ಮನೆ ನಿರ್ಮಿಸಿಕೊಡಲು ಸಿದ್ದರಿದ್ದೇವೆ.
ಪಟ್ಟಣದ ಒಕ್ಕಲಿಗರಿಗೂ ಈಗಿರುವ ಜಾಗದಲ್ಲಿ ಉತ್ತಮ ಮನೆ ಕಟ್ಟಿಕೊಳ್ಳಲು ಅನುದಾನ ನೀಡಲಾಗುವುದು ಎಂದು ನೋಡಲ್ ಆಫೀಸರ್ ಡಾ.ಬಾಲ ಗುರುಮೂರ್ತಿ ತಿಳಿಸಿದ್ದಾರೆ.

ಸುಡುಗಾಡು ಸಿದ್ದರು ಗುಡಿಸಲು ಹಾಕಿಕೊಂಡಿರುವ ಜಾಗ ರೆವಿನ್ಯು ಜಾಗ ಅದನ್ನು ಪುರಸಭೆಯಿಂದ ಕೊಡಲು ಸಾಧ್ಯವಿಲ್ಲ, ಪುರಸಭೆ ಯಿಂದ ಯಾವುದೇ ಸವಲತ್ತು ನೀಡಲಾಗುತ್ತಿಲ್ಲ, ಕಾನೂನು ಅಡ್ಡಿ ಬರುತ್ತಿದೆ, ಪುರಸಭೆಯಿಂದ ಬಾವನಹಳ್ಳಿ ಬಳಿ ಜಮೀನನ್ನು ನೀಡುವಾಗ ನಿವೇಶನ ವಿತರಿಸ ಲಾಗುವುದು.  ಸರ್ಕಾರವೇನಾದರೂ ಗುಂಡು ತೋಪಿನ ನಿವೇಶನದ ಹಕ್ಕುಪತ್ರ ನೀಡಿದರೆ, ಪುರಸಭೆಯಿಂದ ಅಂಬೇಡ್ಕರ್ ವಸತಿ ನಿಗಮ ಯೋಜನೆಯಡಿ ಮನೆಯನ್ನು ಮಂಜೂರು ಮಾಡ ಲಾಗುವುದು ಎಂದು ಪುರಸಭಾಧ್ಯಕ್ಷ ಚಂದ್ರಶೇಖರ್ ಹೇಳಿದರು.

Facebook Comments

Sri Raghav

Admin