ಭಾರತಕ್ಕೆ ಮೊದಲ ಒಲಿಂಪಿಕ್ಸ್ ಗೆದ್ದುಕೊಟ್ಟು ಶಂಷೇರ್ ಖಾನ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Shamsher-Khan-02

ವಿಜಯವಾಡ, ಅ.16- ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡಕ್ಕೆ ಮೊದಲ ಪದಕ ಗೆದ್ದುಕೊಟ್ಟು ದೇಶದ ಘನತೆಯನ್ನು ಹೆಚ್ಚಿಸಿದ್ದ ಈಜುಪಟು ಶಂಷೇರ್ ಖಾನ್ (87) ವಿಧಿವಶರಾಗಿದ್ದಾರೆ. 1956ರಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಪಾಲ್ಗೊಂಡಿದ್ದ ಗುಂಟೂರು ತಾಲ್ಲೂಕಿನ ಕೈತೆಪಾಲೆ ಗ್ರಾಮದ ಶಂಷೇರ್ ಖಾನ್‍ಗೆ ನಿನ್ನೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಶಂಷೇರ್ ಖಾನ್ ಅವರು ಮೆಲ್ಬೋರ್ನ್ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದ 200 ಮೀಟರ್ ಬಟರ್‍ಫ್ಲೈ ವಿಭಾಗದಲ್ಲಿ ನೂತನ ದಾಖಲೆಯನ್ನೇ ನಿರ್ಮಿಸಿದ್ದರು. ಅವರ ನಿಧನಕ್ಕೆ ಸ್ಥಳೀಯ ಮುಖಂಡರು, ಹಲವಾರು ಕ್ರೀಡಾಪಟುಗಳು ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin