ವಾಗ್ವಾದದ ನಡುವಿಯೂ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Pandavapura
ಪಾಂಡವಪುರ, ಅ.16- ತಾಲೂಕಿನ ದೊಡ್ಡಬೋಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲು ತೆರಳಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯಅವರಿಗೆ ಗ್ರಾಮದ ಒಂದು ಗುಂಪು ಕೊಠಡಿ ನಿರ್ಮಾಣ ಮಾಡದಂತೆ ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು. ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆಯ 15.5 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಎರಡು ಹೊಸ ಶಾಲಾ ಕೊಠಡಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲು ಶಾಸಕರು ಗ್ರಾಮಕ್ಕೆ ತೆರಳಿದರು. ಈ ವೇಳೆ ಕೊಠಡಿ ನಿರ್ಮಾಣದಿಂದ ಶಾಲಾ ಆವರಣದಲ್ಲಿರುವ ದೇವಸ್ಥಾನಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಎರಡುಕೊಠಡಿ ಬದಲಿಗೆ ಒಂದು ಕೊಠಡಿ ನಿರ್ಮಿಸಿಕೊಳ್ಳಿ, ಇಲ್ಲವಾದರೆ ಪಕ್ಕದಲ್ಲೇ ಶಾಲೆಗೆ ಸೇರಿದ ಖಾಲಿ ಜಾಗದಲ್ಲಿಕೊಠಡಿ ನಿರ್ಮಾಣ ಮಾಡಿಕೊಳ್ಳಿ ಎಂದು ಗುಂಪು ವಿರೋಧ ವ್ಯಕ್ತಪಡಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಶಾಲೆಯ ಖಾಲಿ ನಿವೇಶನದಲ್ಲಿ ಕೊಠಡಿ ನಿರ್ಮಾಣ ಮಾಡಿದರೆ ಆಟದ ಮೈದಾನಕ್ಕೆ ತೊಂದರೆಯಾಗುತ್ತದೆ. ತಾಂತ್ರಿಕವಾಗಿ ಕೊಠಡಿ ಇಲ್ಲೇ ನಿರ್ಮಾಣ ಮಾಡುವುದು ಸರಿ. ನಿಮಗೆ ಜಾಗ ಬೇಕಾದರೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿಕೊಳ್ಳಿ, ನಾನು ಗುದ್ದಲಿ ಪೂಜೆ ನೆರವೇರಿಸಲು ಬಂದಿದ್ದೇನೆ. ಪೂಜೆ ಮಾಡಿ ಹೋಗುತ್ತೇನೆ ಎಂದರಲ್ಲದೇ, ಶಾಲಾ ಕೊಠಡಿ ಕೊರತೆ ಕಾರಣದಿಂದ ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ-ಪ್ರವಚನ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಶಾಲಾ ಕೊಠಡಿ ನಿರ್ಮಾಣವನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರು ಹಾಗೂ ಎಂಜನಿಯರ್‍ಗೆ ಸೂಚಿಸಿದರು. ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ತೆರಳಿದ ನಂತರ ಗುಂಪು ಪಂಚಾಯತ್ ರಾಜ್‍ ಎಂಜನಿಯರ್ ಜತೆ ವಾಗ್ವಾದಕ್ಕೆ ಇಳಿದರು.

ಪಂಚಾಯತ್ ರಾಜ್‍ ಎಂಜನಿಯರಿಂಗ್ ಇಲಾಖೆ ಎಇಇ ರಾಜೇಶ್ ಕೆ.ಮುನ್ಷಿ, ಎಇ ಮಹದೇವಸ್ಥಾಮಿ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಸಿ.ಕೆ.ಮಂಜುನಾಥ್, ವೆಂಕಟೇಶ್, ಚಿನಕುರಳಿ ವಿಶ್ವನಾಥ್, ನರಸಿಂಹೇಗೌಡ, ಗುತ್ತಿಗೆದಾರರಾದ ಸಿ.ಕೆ.ಪುಟ್ಟೇಗೌಡ, ದೊಡ್ಡಬೋಗನಹಳ್ಳಿ ಲೋಕೇಶ್, ಶಾಲೆಯ ಮುಖ್ಯ ಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಯಜಮಾನರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Facebook Comments

Sri Raghav

Admin