ಶಾಸಕರಿಗೆ ಗಿಫ್ಟ್ ಓಕೆ, ಚಿನ್ನದ ಬಿಸ್ಕತ್ ಯಾಕೆ..? : ಸೀತಾರಾಮ್

ಈ ಸುದ್ದಿಯನ್ನು ಶೇರ್ ಮಾಡಿ

MR-Seetaraman--01
ಬೆಂಗಳೂರು, ಅ.16- ವಿಧಾನಸೌಧದ ವಜ್ರಮಹೋತ್ಸವ ಸಂದರ್ಭದಲ್ಲಿ ಶಾಸಕರಿಗೆ ಉಡುಗೊರೆ ನೀಡುವುದು ತಪ್ಪಲ್ಲ ಎಂದು ವಿಜ್ಞಾನ-ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಿಗೆ ಚಿನ್ನದ ಬಿಸ್ಕತ್ ನೀಡುವ ಅವಶ್ಯಕತೆ ಇಲ್ಲ ಎಂಬುದು ತನ್ನ ವಯಕ್ತಿಕ ಅಭಿಪ್ರಾಯ. ಈ ವಿಚಾರದಲ್ಲಿ ವಿಧಾನಸಭಾಧ್ಯಕ್ಷರು ಮತ್ತಷ್ಟು ವಿಸ್ತಾರವಾಗಿ ಚರ್ಚೆ ಮಾಡಬೇಕು. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕರಿಗೆ ವಜ್ರಮಹೋತ್ಸವ ಸ್ಮರಣಾರ್ಥ ಫಲಕಗಳನ್ನು ಉಡುಗೊರೆಯಾಗಿ ನೀಡಬಹುದು ಎಂದು ಸಲಹೆ ನೀಡಿದ ಅವರು, ಬಂಗಾರದ ಪದಕದ ಬದಲಾಗಿ ನೆನಪಿನ ಕಾಣಿಕೆ ನೀಡಿದ್ದರೆ ಸಾಕಾಗಿತ್ತು. ಅದ್ಧೂರಿ ಕಾಣಿಕೆ ನೀಡುವ ಅಗತ್ಯವಿರಲಿಲ್ಲ ಎಂದರು.

Facebook Comments

Sri Raghav

Admin