ಆದಿಶಕ್ತಿ ದೇವಿಯ ಆಭರಣ ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.17- ಪ್ರಸಿದ್ಧ ಆದಿಶಕ್ತಿ ದೇವಿಯ ಗುಡಿಗೆ ನುಗ್ಗಿದ ಚೋರರು ದೇವಿ ಮೇಲಿದ್ದ ಆಭರಣಗಳನ್ನು ಕದ್ದೊಯ್ದಿದ್ದಾರೆ. ನಗರದ ಹೊರವಲಯದ ಮೈದನಹಳ್ಳಿಯಲ್ಲಿರುವ ಆದಿಶಕ್ತಿ ದೇವಾಲಯದಲ್ಲಿ ನಿನ್ನೆ ಸಂಜೆ ಎಂದಿನಂತೆ ಪೂಜೆ ನೆರವೇರಿಸಿ ರಾತ್ರಿ 10 ಗಂಟೆಗೆ ಬೀಗ ಹಾಕಲಾಗಿತ್ತು. ಮಧ್ಯರಾತ್ರಿ ಚೋರರು ದೇವಾಲಯದ ಬಾಗಿಲು ಒಡೆದು ಗರ್ಭಗುಡಿಗೆ ನುಗ್ಗಿ ಆದಿಶಕ್ತಿ ದೇವಿಯ ವಿಗ್ರಹದ ಮೇಲಿದ್ದ ಆಭರಣಗಳನ್ನು ಕದ್ದೊಯ್ದಿದ್ದಾರೆ. ಎಂದಿನಂತೆ ಇಂದು ಬೆಳಗ್ಗೆ ಅರ್ಚಕರು ಪೂಜೆಗೆ ದೇವಾಲಯಕ್ಕೆ ಬಂದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಇಲವಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin