ಆಸ್ಟ್ರಿಯಾ ದೇಶವನ್ನು ಮುನ್ನೆಡೆಸುವ ವಿಶ್ವದ ಅತಿ ಕಿರಿಯ ನಾಯಕನಾಗಿ ಕರ್ಜ್ ನೇಮಕ ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

youngest

ವಿಯೆನ್ನಾ, ಅ.17-ಆಸ್ಟ್ರಿಯಾದ ವಿದೇಶಾಂಗ ಸಚಿವ 31 ವರ್ಷದ ಸಬಾಸ್ಟಿಯನ್ ಕರ್ಜ್ ಆ ದೇಶವನ್ನು ಮುನ್ನೆಡೆಸುವ ಅತ್ಯಂತ ಕಿರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಐರೋಪ್ಯ ಸಮುದಾಯದ ದೇಶಗಳಲ್ಲೇ ಅತ್ಯಂಕ ಚಿಕ್ಕ ವಯಸ್ಸಿನ ರಾಷ್ಟ್ರ ಮುಖಂಡ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ಧಾರೆ.
ನಿನ್ನೆ ನಡೆದ ಚುನಾವಣೆಯಲ್ಲಿ ಕರ್ಜ್ ನೇತೃತ್ವದ ಪೀಪಲ್ಸ್ ಪಾರ್ಟಿ (ಪಿಪಿ) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಿಪಿ ಸೇರಿದಂತೆ ಯಾವುದೇ ಪಕ್ಷವೂ ಸ್ಪಷ್ಟ ಬಹುಮತ ಹೊಂದಿಲ್ಲವಾದರೂ ಆಸ್ಟ್ರಿಯಾದ ಮುಂದಿನ ಚಾನ್ಸುಲರ್ ಆಗಿ ಅವರು ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪೀಪಲ್ಸ್ ಪಾರ್ಟಿ ಶೇ.31.4ರಷ್ಟು ಮತಗಳನ್ನು ಗಳಿಸಿ ಪ್ರಥಮ ಸ್ಥಾನದಲ್ಲಿದೆ.

Facebook Comments

Sri Raghav

Admin