ಜಾನುವಾರು ಸಾಗಾಟ ತಡೆಯಲು ಹೋದ ಕಾನ್ಸ್ಟೇಬಲ್ ಮೇಲೆ ವಾಹನ ಹರಿಸಿ ಹತ್ಯೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Udupi--01

ಉಡುಪಿ, ಅ.17- ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆಯಲು ಮುಂದಾದ ಕಾನ್ಸ್ಟೇಬಲ್ ಮೇಲೆಯೇ ವಾಹನ ಹರಿಸಿ ಹತ್ಯೆ ನಡೆಸಲು ಯತ್ನಿಸಿರುವ ಘಟನೆ ಕಂಡ್ಲೂರು ಬಳಿ ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರಿನ ಗುಲ್ವಾಡಿ ಸೇತುವೆ ಬಳಿ 25 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಕಾನ್‍ಸ್ಟೆಬಲ್ ಪ್ರಶಾಂತ್ ನಾಗಣ್ಣ ಅವರಿಗೆ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಕಾನ್‍ಸ್ಟೆಬಲ್ ಕಂಡ್ಲೂರು ಬಳಿ ಈ ವಾಹನ ಬರುತ್ತಿದ್ದುದನ್ನು ಗಮನಿಸಿ ತಡೆಯಲು ಮುಂದಾಗುತ್ತಿದ್ದಂತೆ ಇವರ ಮೇಲೆಯೇ ವಾಹನ ಹರಿಸಿ ಅಪಘಾತವೆಸಗಲು ಯತ್ನಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ವೇಳೆ ಕಾನ್‍ಸ್ಟೆಬಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin