ಅಧಿಕಾರಿಗಳು ಆತ್ಮತೃಪ್ತಿಯಿಂದ ಕೆಲಸ ನಿರ್ವಹಿಸುವಂತೆ ಸಂಸದ ಧ್ರುವನಾರಾಯಣ್ ಕಿವಿಮಾತು

ಈ ಸುದ್ದಿಯನ್ನು ಶೇರ್ ಮಾಡಿ

T-narasipura-1

ತಿ.ನರಸೀಪುರ, ಅ.18- ಅಧಿಕಾರಿಗಳು ತಾವು ಮಾಡುವ ಕೆಲಸದಲ್ಲಿ ಆಸಕ್ತಿ ತೋರಿ ಆತ್ಮತೃಪ್ತಿ ಹೊಂದುವಂತೆ ಕೆಲಸ ನಿರ್ವಹಿಸಬೇಕೆಂದು ಸಂಸದ ಆರ್.ಧ್ರುವನಾರಾಯಣ್ ಸೂಚನೆ ನೀಡಿದರು. ತಾ.ಪಂ ಸಭಾಂಗಣದಲ್ಲಿ ಕರೆಯಲಾಗಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ವರ್ಷದಲ್ಲಿ 50 ಲಕ್ಷ ರೂ.ಗಳ ಗುರಿಯೊಂದಿಗೆ ಅಭಿವೃದ್ದಿ ಕಾರ್ಯಕೈಗೊಳ್ಳಬೇಕು, ತಾಲ್ಲೂಕಿನ  ಉಕ್ಕಲಗೆರೆ, ಕೇತುಪುರ ಗ್ರಾಮ ಪಂಚಾಯಿಯಲ್ಲಿ ಈ ಬಾರಿ ಅತಿ ಕಡಿಮೆ ಪ್ರಗತಿ ಸಾಧಿಸಿದ್ದು, ಅಧಿಕಾರಿಗಳು ಗ್ರಾಪಂನಲ್ಲಿ ಕೂರದೇ ಗ್ರಾಮಗಳಿಗೆ ಭೇಟಿ ನೀಡಿ ಕೇಂದ್ರ ಪುರಸ್ಕೃತ ಯೋಜನೆಗಳ ಸದುಪಯೋಗಕ್ಕೆ ಶ್ರಮಿಸಬೇಕೆಂದರು.

ಕೃಷಿ ಇಲಾಖೆಯ ಕೇವಲ ಶೇ.49 ಪ್ರಗತಿ ಸಾಧಿಸಿದ್ದು ಇದನ್ನು ಹೆಚ್ಚಿಸುವಂತೆ ಕೃಷಿ ಅಧಿಕಾರಿ ಕೃಷ್ಣಮೂರ್ತಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ, ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ಹಣ ಬರುತ್ತಿಲ್ಲ ಹಾಗಾಗಿ ನಾವು ಪ್ರಗತಿ ಸಾಧ್ಯವಾಗಿಲ್ಲ ಎಂದು ಹೇಳಿದರು. ಇವರ ಮಾತಿನಿಂದ ಕುಪಿತರಾದ ಸಂಸದರು, ಇಲ್ಲಿ ಕತೆ ಹೇಳಲು ಬರಬೇಡಿ. ಆಸಕ್ತಿ, ನಿಷ್ಟೆಯಿಂದ ಕೆಲಸ ಮಾಡಿ, ಇತರೇ ಇಲಾಖೆಗಳು ಶೇ.100 ಪ್ರಗತಿ ಸಾಧಿಸಿವೆ. ನಿಮ್ಮ ಇಲಾಖೆಯಲ್ಲಿ ಏಕೆ ಪ್ರಗತಿ ಸಾಧ್ಯವಿಲ್ಲ ಎಂದು ಅಧಿಕಾರಿ ವಿರುದ್ದ ಗರಂ ಆದರು. ಕೇಂದ್ರ ಪುರಸ್ಕೃತ ವಸತಿ ಯೋಜನೆಯಡಿ ತಾಲ್ಲೂಕಿಗೆ 71 ಸಾವಿರ  ಮನೆಗಳು ಮಂಜೂರಾಗಿದ್ದು, 1313 ಮನೆಗಳು ಮಾತ್ರ ಪೂರ್ಣಗೊಂಡಿವೆ. ಆರ್ಥಿಕ ಸಮಸ್ಯೆಯಿಂದ 2883 ಮಂದಿ ಫಲಾನುಭವಿಗಳು ಮನೆ ಕಟ್ಟಲು ಸಾಧ್ಯವಾಗಿಲ್ಲ ಎಂದು ಇಒ ರಾಜು ತಿಳಿಸಿದರು.  ಕೆಲ ಕಿಡಿಗೇಡಿಗಳು ಕಳ್ಳಬಟ್ಟಿಯನ್ನು ಬೈಕ್‍ಗಳಲ್ಲಿ ಹಳ್ಳಿ ಹಳ್ಳಿಗೆ ವಿತರಣೆ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬಂದಿದ್ದು, ಪೋಲಿಸ್ ಇಲಾಖೆ ಸಹಾಯ ಪಡೆದು ಇದರ ಬಗ್ಗೆ ಕ್ರಮವಹಿಸುವಂತೆ  ಅಬಕಾರಿ ಅಧಿಕಾರಿ ಭಾಗ್ಯಮ್ಮಗೆ ತಿಳಿಸಿದರು.

ನೋಟಿಸ್:  ಕರ್ತವ್ಯದಲ್ಲಿದ್ದು, ಕೆಡಿಪಿ ಸಭೆಗೆ ಗೈರು ಹಾಜರಾದ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಎಸಿಎಫ್, ಆರ್‍ಎಫ್‍ಓರವರಿಗೆ ಶೊಕಾಸ್ ನೊಟಿಸ್ ನೀಡಿ ವರದಿ ನೀಡುವಂತೆ ಸಂಸದ ಧ್ರುವನಾರಾಯಣ್ ಇಒ ರಾಜುಗೆ ಸಂಸದರು ಸೂಚನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ತಾ.ಪಂ ಅಧ್ಯಕ್ಷ ಸಿ.ಚಾಮೇಗೌಡ, ಜಿ.ಪಂ ಸದಸ್ಯರಾದ ಮಂಜುನಾಥ್, ಸುಧೀರ್, ಮಂಗಳಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಜಿ.ಪಂ ಉಪ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಜಿ.ಪಂ ಯೋಜನಾಧಿಕಾರಿ ಪ್ರಭುಸ್ವಾಮಿ, ತಹಸೀಲ್ದಾರ್ ಬಸವರಾಜುಚಿಗರಿ, ವೃತ್ತ ನೀರಿಕ್ಷಕ ಮನೋಜ್‍ಕುಮಾರ್, ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮಪಂಚಾಯಿತಿ ಪಿಡಿಓಗಳು ಹಾಜರಿದ್ದರು.

Facebook Comments

Sri Raghav

Admin