ಜಡೆ ಕತ್ತರಿಸಿದ ಪ್ರಕರಣ : ಗೋಲಿಬಾರ್‍ನಲ್ಲಿ ನಾಲ್ವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Kashmir--02

ಶ್ರೀನಗರ, ಅ.18-ಜಡೆ ಕತ್ತರಿಸಲಾಗಿದೆ ಎನ್ನಲಾದ ಪ್ರಕರಣದ ನಂತರ ಜಮ್ಮು ಮತ್ತು ಕಾಶ್ಮೀರದ ಪಹಲ್‍ಗಮ್ ಪ್ರದೇಶದಲ್ಲಿ ಭುಗಿಲೆದ್ದ ಗಲಭೆ ಸಂದರ್ಭದಲ್ಲಿ ಉದ್ರಿಕ್ತ ಗುಂಪಿನ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮವಾಗಿ ನಾಲ್ವರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಅನಂತನಾಗ್ ಜಿಲ್ಲೆಯ ಪಹಲ್‍ಗಮ್ ಪ್ರದೇಶದ ಗ್ರಾಮವೊಂದರಲ್ಲಿ ಮಹಿಳೆಯೊಬ್ಬಳ ಜಡೆ ಕತ್ತರಿಸಿದನೆನ್ನಲಾದ ಆರೋಪಿಯೊಬ್ಬ ಸಿಕ್ಕಿಬಿದ್ದ ನಂತರ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಭದ್ರತಾ ಪಡೆ ವಾಹನವೊಂದು ಹಾದು ಹೋಗುತ್ತಿದ್ದಾಗ ಪ್ರತಿಭಟನಾಕಾರರು ಅಡ್ಡಗಟ್ಟಿ, ಚಕ್ರಗಳ ಗಾಳಿ ತೆಗೆಯಲು ಯತ್ನಿಸಿದ್ದರು. ಉದ್ರಿಕ್ತ ಗುಂಪು ಹಿಂಸಾಕೃತ್ಯಕ್ಕೆ ಇಳಿದಾಗ ಯೋಧರು ಗುಂಡು ಹಾರಿಸಿದರು. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin