ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Kunigal

ಕುಣಿಗಲ್, ಅ.18- ಕೆರೆಯಲ್ಲಿ ಆಟವಾಡುತ್ತಿದ್ದಾಗ ಸಹೋದರರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪಟ್ಟಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹುರ್ತಿದುರ್ಗ ಹೋಬಳಿಯ ಸಂತೇಪೇಟೆ ಗ್ರಾಮದ ನಿವಾಸಿ ಜೀವನ್ (10), ಸಂತೋಷ್ (12) ಮೃತಪಟ್ಟ ಬಾಲಕರು. ಗಂಗಾಧರ ಮತ್ತು ರತ್ನಮ್ಮನ ಮಕ್ಕಳಾದ ಜೀವನ್ ಮತ್ತು ಸಂತೋಷ್ ತಾಯಿ ಜೊತೆ ಬಟ್ಟೆ ತೊಳೆಯಲೆಂದು ಪಕ್ಕದ ಗ್ರಾಮದ ಬೆಟ್ಟಳ್ಳಿ ಕೆರೆಗೆ ತೆರಳಿದ್ದಾರೆ. ಈ ವೇಳೆ ಜೀವನ್ ಮತ್ತು ಸಂತೋಷ್ ನೀರಿನಲ್ಲಿ ಆಟವಾಡುವಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪಟ್ಟಣದ ಪಿಎಸ್‍ಐ ಪುಟ್ಟೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments