ನೋಟ್ ಬ್ಯಾನ್ ಬೆಂಬಲಿಸಿದ್ದಕ್ಕೆ ಸಾರ್ವಜನಿಕರ ಕ್ಷಮೆಯಾಚಿಸಿದ ಕಮಲ್ ಹಾಸನ್

ಈ ಸುದ್ದಿಯನ್ನು ಶೇರ್ ಮಾಡಿ

Kamal-Hassna--01

ಚೆನ್ನೈ,ಅ.18-ಪ್ರಧಾನಿ ನರೇಂದ್ರ ಮೋದಿಯವರ ನೋಟು ಅಮಾನೀಕರಣ ಬೆಂಬಲಿಸಿದ್ದಕ್ಕೆ ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದಾರೆ.  ಕಳೆದ ನ.8ರಂದು 500, 1000 ಮುಖಬೆಲೆಯ ನೋಟುಗಳನ್ನು ಅಮಾನೀಕರಣಗೊಳಿಸಿದ ಸಂದರ್ಭದಲ್ಲಿ ನಾನು ಪೂರ್ವಾಪರ ಯೋಚಿಸದೆ ಪ್ರಧಾನಿಯವರ ನೋಟು ಬ್ಯಾನ್‍ನ್ನು ಬೆಂಬಲಿಸಿದ್ದೆ. ಈಗ ವಾಸ್ತಾಂಶ ಅರಿವಾಗಿರುವುದರಿಂದ ಕ್ಷಮೆಯಾಚಿಸುವುದಾಗಿ ತಮಿಳು ನಿಯತ ಕಾಲಿಕೆಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನೋಟು ಅಮಾನೀಕರಣ ಸಂದರ್ಭದಲ್ಲಿ ಇದರಿಂದ ದೇಶಕ್ಕೆ ಅನುಕೂಲವಾಗಬಹುದು ಎಂದು ಯೋಚಿಸಿ ಟ್ವಿಟರ್ ಮೂಲಕ ಪ್ರಧಾನಿ ಮೋದಿಯವರ ನಡೆಯನ್ನು ಬೆಂಬಲಿಸಿದ್ದೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನೋಟು ಅಮಾನೀಕರಣದಿಂದ ದೇಶದ ಜನತೆಗೆ ಅನುಕೂಲವಾಗುವುದಿಲ್ಲ ಎಂದು ಹೇಳುವ ಮೂಲಕ ಕಮಲ್ ಹಾಸನ್ ತಮ್ಮ ಹೇಳಿಕೆಗೆ ಯು ಟರ್ನ್ ಹೊಡೆದಿದ್ದಾರೆ.

Facebook Comments

Sri Raghav

Admin