ಪಟಾಕಿ ಸಿಡಿದು ಬಾಲಕನಿಗೆ ಗಂಭೀರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Crackers--03

ಬಳ್ಳಾರಿ,ಅ.18- ಪಟಾಕಿ ಸಿಡಿದು ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ. ನರಸಿಂಹ(11) ಗಾಯಗೊಂಡ ಬಾಲಕ. ಬಳ್ಳಾರಿ ನಗರ ಬೆಂಗಳೂರು ಮುಖ್ಯರಸ್ತೆಯ ನಿವಾಸಿ ನರಸಿಂಹ ದೀಪಾವಳಿ ಪ್ರಯುಕ್ತ ಇಂದು ಬೆಳಗ್ಗೆಯಿಂದಲೇ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದನು. ಇದೇ ವೇಳೆ ಪಟಾಕಿಯೊಂದು ಸಿಡಿದು ನರಸಿಂಹ ಮುಖಕ್ಕೆ ಗಂಭೀರ ಗಾಯಗಳಾಗಿವೆ. ತಕ್ಷಣವೆ ವಿಮ್ಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬ್ರೂಸ್‍ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Facebook Comments

Sri Raghav

Admin