ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹತ್ಯೆ ಮಾಡಿದರೆ 65 ಲಕ್ಷ ಇನಾಮು..!

ಈ ಸುದ್ದಿಯನ್ನು ಶೇರ್ ಮಾಡಿ

Mamata

ಕೊಲ್ಕತಾ, ಅ.18-ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಹತ್ಯೆ ಮಾಡಿದರೆ, ಒಂದು ಲಕ್ಷ ಡಾಲರ್ (65 ಲಕ್ಷ ರೂ.ಗಳು) ಬಹುಮಾನ ನೀಡುವ ಆಶ್ವಾಸನೆಯ ಸಂದೇಶವೊಂದು ವ್ಯಾಟ್ಸಾಪ್‍ನಲ್ಲಿ ಹರಿದಾಡುತ್ತಿದೆ. ಅಮೆರಿಕದ ಪ್ರೊರಿಡಾದಿಂದ ಮುರ್ಶಿದಾಬಾದ್‍ನ ಬೆರ್ಹಾಂಪುರದ 19 ವರ್ಷದ ವಿದ್ಯಾರ್ಥಿ ಮೊಬೈಲ್ ಫೋನ್‍ಗೆ ಈ ಸಂದೇಶ ಬಂದಿದೆ.
ಲ್ಯಾಟಿನ್ ಮೂಲದ ವ್ಯಕ್ತಿಯೆಂದು ಹೇಳಿಕೊಂಡಾತನಿಂದ ಈ ಸಂದೇಶ ರವಾನೆಯಾಗಿದೆ. ಉಗ್ರಗಾಮಿ ಸಂಘಟನೆಯೊಂದರ ಪರವಾಗಿ ನಾನು ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲೂ ಇದೇ ಕಾರಣಕ್ಕಾಗಿ ಪಾಲುದಾರರ ನೇಮಕವನ್ನು ಎದುರು ನೋಡುತ್ತಿದ್ದೇನೆ ಎಂದು ಆತ ಸಂದೇಶ ರವಾನಿಸಿರುವುದಾಗಿ ವಿದ್ಯಾರ್ಥಿ ಹೇಳಿದ್ದಾನೆ.

ಮಮತಾ ಬ್ಯಾನರ್ಜಿ ಅವರನ್ನು ಹತ್ಯೆ ಮಾಡಲು ನಮಗೆ ನೆರವು ನೀಡುವುದಾದರೆ ನಾವು 65 ಲಕ್ಷ ರೂ.ಗಳನ್ನು ಬಹುಮಾನವಾಗಿ ನೀಡುತ್ತೇವೆ. ನೀನು ಸುರಕ್ಷಿತವಾಗಿರುವೆ. ಇದಕ್ಕೆ ನೀನು ಸಿದ್ಧವಾಗಿರುವೆಯಾ ಎಂದು ಆತ ಪ್ರಶ್ನಿಸಿದ್ದಾನೆ. ವಿದ್ಯಾರ್ಥಿ ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳಿದ್ಧಾನೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಆ ವ್ಯಕ್ತಿ, ಇಲ್ಲ ಇದು ತಕ್ಷಣ ಆಗಬೇಕಾದ ಕಾರ್ಯ. ನೀನು ಒಲ್ಲೆ ಎಂದರೆ ನಾವು ಬೇರೊಬ್ಬರನ್ನು ನಿಯೋಜಿಸುತ್ತೇವೆ. ಈ ಅವಕಾಶವನ್ನು ಕೈ ಚೆಲ್ಲಬೇಡ. ಒಂದು ಲಕ್ಷ ಡಾಲರ್ ಕಳೆದುಕೊಳ್ಳಬೇಡ ಎಂದು ಆಮೀಷವೊಡ್ಡಿದ್ದಾನೆ. ಇದಕ್ಕೆ ಆ ವಿದ್ಯಾರ್ಥಿ ನೋ ಥ್ಯಾಂಕ್ಸ್ ಎಂದು ಹೇಳಿದ್ದಾನೆ.

ಅದೇ ದಿನ ಮಧ್ಯಾಹ್ನ 2.45ರ ವೇಳೆಗೆ ಆ ವ್ಯಕ್ತಿ ಸಂದೇಶ ರವಾನಿಸಿ ನೀವು ಈ ಅವಕಾಶ ಕಳೆದುಕೊಂಡಿರುವೆ ಎಂದು ತಿಳಿಸಿದ್ದಾನೆ. ಮತ್ತೆ 3.30ಕ್ಕೆ ಮತ್ತೊಂದು ಸಂದೇಶ ರವಾನೆಯಾಗಿದೆ. ತಾನು ಭಾರತಕ್ಕೆ ಬರುವುದಾಗಿ ಆತ ಹೇಳಿದ್ದಾನೆ. ಆ ವ್ಯಕ್ತಿಗೆ ತಿರುಗೇಟು ನೀಡಿರುವ ವಿದ್ಯಾರ್ಥಿ ನಾನು ಭಾರತವನ್ನು ಪ್ರೀತಿಸುತ್ತೇನೆ, ಅದರ ವಿನಾಶವನ್ನಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಆ ವ್ಯಕ್ತಿ ನಾವು ಭಾರತವನ್ನು ನಾಶಮಾಡುವುದಿಲ್ಲ. ನಾವು ಒಬ್ಬ ವ್ಯಕ್ತಿಯನ್ನು (ಮಮತಾ ಬ್ಯಾನರ್ಜಿ) ಮಾತ್ರ ಹತ್ಯೆ ಮಾಡಲು ಬಯಸಿದ್ದೇವೆ ಎಂದು ಹೇಳಿದ್ದಾನೆ.   ಈ ಸಂಬಂಧ ವಿದ್ಯಾರ್ಥಿ ನೀಡಿರುವ ದೂರನ್ನು ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

Facebook Comments

Sri Raghav

Admin