ಪಾಕ್ ಮೇಲೆ ನಿಗಾ ಇಡಲು ಅಮೆರಿಕಕ್ಕೆ ಭಾರತ ನೆರವು : ನಿಕ್ಕಿ ಹ್ಯಾಲೆ

ಈ ಸುದ್ದಿಯನ್ನು ಶೇರ್ ಮಾಡಿ

Nikky-Haley

ವಾಷಿಂಗ್ಟನ್, ಅ.18-ಪಾಕಿಸ್ತಾನದ ಭಯೋತ್ಪಾದನೆ ಚಟುವಟಿಕೆಗಳ ಮೇಲೆ ನಿಗಾ ಇಡಲು ಅಮೆರಿಕಕ್ಕೆ ಭಾರತವು ನೆರವಾಗಬಲ್ಲದು ಹಾಗೂ ಅದು ಉಗ್ರಗಾಮಿಗಳಿಗೆ ಸುರಕ್ಷಿತ ಸ್ವರ್ಗ ಎಂಬುದಕ್ಕೆ ಉತ್ತರದಾಯಿಯಾಗುವಂತೆ ಮಾಡಬಲ್ಲದು ಎಂದು ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಏಷ್ಯಾ ಖಂಡದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡಬೇಕೆಂಬುದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗುರಿಯಾಗಿದೆ. ಇದನ್ನು ಸಾಧಿಸಲು ಭಾರತದ ನೆರವು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಯುಎಸ್-ಇಂಡಿಯಾ ಫ್ರೆಂಡ್‍ಶಿಪ್ ಕೌನ್ಸಿಲ್ ಏರ್ಪಡಿಸಿದ್ದ ಸಭೆಯೊಂದರಲ್ಲಿ ಮಾತನಾಡಿದ ಭಾರತೀಯ ಮೂಲದ ಅಮೆರಿಕ ಉನ್ನತ ರಾಜತಂತ್ರe್ಞÉಯಾದ ನಿಕ್ಕಿ, ನಾವು ಭಾರತದೊಂದಿಗೆ ಸದೃಢ ಆರ್ಥಿಕ ಮತ್ತು ಭದ್ರತಾ ಸಹಕಾರ ಪಾಲುದಾರಿಕೆಯನ್ನು ಮತ್ತಷ್ಟು ಬಲಗೊಳಿಸಲು ಉತ್ಸುಕವಾಗಿರುವುದಾಗಿ ನುಡಿದರು.

Facebook Comments

Sri Raghav

Admin