ಮನೆ ಗೋಡೆ ಕುಸಿದು ಕಾರು-ಬೈಕ್ ಜಖಂ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ ,ಅ.18-ಕಳೆದ ಒಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ನಗರದ 58ನೇ ವಾರ್ಡ್‍ನ ಮನೆಯೊಂದು ಕುಸಿದುಬಿದ್ದಿದ್ದು , ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ವಾರ್ಡ್ ನಂ.58 ಬಡಿಗೇರ ಓಣಿ, ಮೆಹರುನ್ನೀಸಾ ಬಾಲಸಿಂಗ್ ಎಂಬುವರ ಮನೆ ಶಿಥಿಲವಾಗಿತ್ತು. ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದ ರಾತ್ರಿ ಮನೆಯ ಎರಡು ಕಡೆ ಗೋಡೆಗಳು ಕುಸಿದುಬಿದ್ದಿದೆ.

ಗೋಡೆ ಪಕ್ಕದ ಮನೆ ಮಹೇಶ್ ಮರೆವಾಡ ಎಂಬುವರ ಕಾಂಪೌಂಡ್ ಮೇಲೆ ಬಿದ್ದಿರುವುದರಿಂದ ಇಲ್ಲಿ ನಿಲ್ಲಿಸಿದ್ದ ಸ್ಯಾಂಟ್ರೋ ಕಾರು ಹಾಗೂ ಎರಡು ಬೈಕ್‍ಗಳು ಸಂಪೂರ್ಣ ಜಖಂಗೊಂಡಿವೆ. ಗಂಟಿಕೇರಿ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುದ್ದಿ ತಿಳಿದು ಕಂದಾಯ ಅಧಿಕಾರಿ ಸುಣಗಾರ, ಹುಬ್ಬಳ್ಳಿ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Facebook Comments