ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಎನ್ಎಸ್ಎಸ್ ಶಿಬಿರದ ಕೊಡುಗೆ ಅನನ್ಯ

ಈ ಸುದ್ದಿಯನ್ನು ಶೇರ್ ಮಾಡಿ

Beluru

ಬೇಲೂರು, ಅ.18- ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ವಿದ್ಯಾರ್ಥಿಗಳ ಜೀವನದಲ್ಲಿ ಅಮೂಲ್ಯವಾದ ಪಾಠವನ್ನು ಹೇಳಿಕೊಡುವುದಲ್ಲದೆ ಅವರಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಂದ್ರೇಗೌಡ ಹೇಳಿದರು. ತಾಲೂಕಿನ ತೊಳಲು ಗ್ರಾಮದಲ್ಲಿ ಬೇಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಮಾತನಾಡಿದ ಅವರು, ಪ್ರತಿ ಹಳ್ಳಿಗಳಲ್ಲೂ ಇಂತಹ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿರಬೇಕು, ಆಗಹಳ್ಳಿಯ ಗ್ರಾಮಸ್ಥರಲ್ಲೂ ಸ್ವಚ್ಛತೆ ಮತ್ತು ಪರಿಸರವನ್ನು ಕಾಪಾಡಿಕೊಳ್ಳುವ ಮನೋಭಾವವನ್ನು ಮೂಡಿಸಿದಂತಾಗುತ್ತದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಮಾತನಾಡಿ, ಈ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಉತ್ತಮ ಬೆಳವಣಿಗೆಗಳನ್ನು ಕಲಿಯಬಹುದಾಗಿದೆ. ಗ್ರಾಮಗಳ ಜನರಿಗೆ ಸ್ವಚ್ಛತೆಯೊಂದಿಗೆ ನೈರ್ಮಲ್ಯವನ್ನು ಕಾಪಾಡುವುದನ್ನು ಹೇಳಿ ಕೊಟ್ಟಲ್ಲಿ ಗಾಂಧಿಯವರ ರಾಮರಾಜ್ಯದ ಕನಸನ್ನು ಈಡೇರಿಸಬಹುದಾಗಿದೆ ಎಂದರು. ಜೆಡಿಎಸ್ ತಾಲೂಕು ಅದ್ಯಕ್ಷ ತೊ,ಚ,ಅನಂತಸುಬ್ಬರಾಯ, ಪತ್ರಕರ್ತರಾದ ವಾಸುದೇವ ಧನ್ಯ, ತೊಳಲು ಗ್ರಾಪಂ ಅದ್ಯಕ್ಷೆ ಎಂ.ಡಿ. ಯಶೋಧ, ಸ್ತ್ರೀಶಕ್ತಿ ಸಂಘದ ಶೋಭಾ ಗಣೇಶ್, ಮಂಜೇಗೌಡ, ಸಿಬ್ಬಂದಿಗಳಾದ ಲಕ್ಷ್ಮೀ ನಾರಾಯಣ್, ಸುಂದರೇಶ್ ಇನ್ನಿತರರಿದ್ದರು.

Facebook Comments

Sri Raghav

Admin