ಶಾಲೆಬಿಟ್ಟ ಮಕ್ಕಳನ್ನು ಪಟಾಕಿ ತಯಾರಿಸುವ ಕೆಲಸಕ್ಕೆ ಬಳಕೆ ವಿಷಾದನಿಯ

ಈ ಸುದ್ದಿಯನ್ನು ಶೇರ್ ಮಾಡಿ

maddugiri

ಮಧುಗಿರಿ,ಅ.18- ತಮಿಳುನಾಡಿನ ಸುತ್ತಮುತ್ತ ಇರುವ ಕಾರ್ಖಾನೆಗಳಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪಟಾಕಿಗಳನ್ನು ತಯಾರು ಮಾಡುವಂತಹ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ಪರಿಸರ ಮಾಲಿನ್ಯ ಮಂಡಳಿಯ ಅಧಿಕಾರಿ ಭೀಮ್ ಸಿಂಗ್ ಗೋಗಿ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಚಿರಕ್ ಪಬ್ಲಿಕ್ ಶಾಲೆಯಲ್ಲಿ ದೀಪಾವಳಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯುವುದರಿಂದ ಪರಿಸರ ಹಾಳಾಗುತ್ತಿದ್ದು ಪ್ರಾಣಿ, ಪಕ್ಷಿಗಳಿಗೆ ತೊಂದರೆ ಆಗುವುದಲ್ಲದೆ ವಾಯುಮಾಲಿನ್ಯವಾಗುತ್ತದೆ. ಹಾಗಾಗಿ ದೀಪಾವಳಿ ಹಬ್ಬವನ್ನು ದೀಪ ಹಚ್ಚುವ ಮುಖಾಂತರ ಆಚರಿಸೋಣ ಎಂದರು. ಪರಿಸರ ಮಾಲಿನ್ಯವಾಗುತ್ತದೆ ಹಾಗೂ ಅದನ್ನು ಯಾವ ರೀತಿ ಸುಧಾರಿಸಬಹುದು ಎಂಬ ಅರಿವು ಕಾರ್ಯಕ್ರಮವನ್ನು ಪ್ರತಿ ವರ್ಷವು ಕೂಡ ನಡಸಿ ಕೂಂಡು ಬಂದಿರುವುದು ಅಭಿನಂದನಾರ್ಹ ಎಂದು ಹೇಳಿದರು.

ಪಿಎಸ್‍ಐ ಪಾಲಾಕ್ಷ ಪ್ರಭು ಮಾತಾನಾಡಿ, ಮಕ್ಕಳಲ್ಲಿ ಪಟಾಕಿಗಳ ಬಗ್ಗೆ ಆಕರ್ಷಣೆ ಇರುತ್ತದೆ ಆದರೆ ಅವುಗಳಿಂದ ಪರಿಸರ ಹಾನಿಯಾಗುತ್ತದೆ ಎಂದು ತಿಳಿದು ಅವುಗಳಿಂದ ದೂರ ಉಳಿದು ಪರಿಸರ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು. ಶಾಲೆಯ ಆಡಳಿತಾಧಿಕಾರಿ ಭಾಸ್ಕರ್ ರೆಡ್ಡಿ, ಕಾರ್ಯಧರ್ಶಿ ಶೈಲಶ್ರೀ, ಬಿ.ಆರ್.ಸಿ ಆನಂದ್, ಮುಖ್ಯಶಿಕ್ಷಕ ರಾಘವೇಂದ್ರ, ಸಹ ಶಿಕ್ಷಕ ಅರುಣ್, ಮಧು ಕುಮಾರ್, ಸುನೀಲ್ ಕುಮಾರ್, ಹೇಮಂತ್ ರಾಜು, ಭೋಧಕ ಭೋಧಕಿಯರು ಹಾಗೂ ವಿದ್ಯಾರ್ಥಿಗಳು ಇದ್ದರು.

 

Facebook Comments

Sri Raghav

Admin