ಸಡಗರದ ಸೌಂದರ್ಯ ಲಹರಿ ಸಪ್ತಾಹ

ಈ ಸುದ್ದಿಯನ್ನು ಶೇರ್ ಮಾಡಿ

Beluru-1

ಬೇಲೂರು, ಅ.18- ಪಟ್ಟಣದ ಶ್ರೀನಂಜುಂಡೇಶ್ವರ ದೇಗುಲದಲ್ಲಿ ಸಡಗರ ಸಂಭ್ರಮದಿಂದ ಸೌಂದರ್ಯ ಲಹರಿಯ 10ನೇ ಸಪ್ತಾಹ ಸಂಪನ್ನ ಕಾರ್ಯಕ್ರಮವನ್ನು ನಡೆಸಲಾಯಿತು, ಶಂಕರಾಚಾರ್ಯರ ಸಂದೇಶವನ್ನು ಪ್ರಚಾರ ಮಾಡಲು ಲೋಕದ ಹಿತಕ್ಕಾಗಿ ಶೃಂಗೇರಿ ಶಾರದಾ ಪೀಠ ಹಾಗೂ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರದ ಯಡತೊರೆ ಮಠದ ಯೋಗಾನಂದೇಶ್ವರ ಸ್ವಾಮೀಜಿ ಮತ್ತು ಶ್ರೀಶಂಕರಭಾರತೀ ಸ್ವಾಮೀಜಿ ನೇತೃತ್ವದಲ್ಲಿ ವೇದಾಂತ ಭಾರತಿ ಸಂಸ್ಥೆಯು 2006 ರಿಂದ ಸೌದರ್ಯ ಲಹರಿ ಪಾರಾಯಣ ಹಮ್ಮಿಕೊಳ್ಳುತ್ತಾ ಬಂದಿದೆ.

ಅದರಂತೆ ಪಟ್ಟಣದ ನಂಜುಂಡೇಶ್ವರ ದೇಗುಲದಲ್ಲಿ ಗಾಯತ್ರಿ ಭಜನಾ ಮಂಡಳಿಯಿಂದ ಸೌಂದರ್ಯ ಲಹರೀ 5ನೇ ಹಂತದವರೆಗೂ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ 15 ದಿನಗಳಿಂದ ಪ್ರತಿದಿನ ಸಂಜೆ ಮಹಿಳೆಯರು ಇಲ್ಲಿನ ದೇಗುಲದಲ್ಲಿ ಸೇರಿ ಪಾರಾಯಣ ಮಾಡಿದ್ದು, ಒಂದು ವಾರಗಳ ಕಾಲ ಸಪ್ತಾಹ ಸಂಪನ್ನವನ್ನು ಮಾಡಿ ಒಬ್ಬೊಬ್ಬರು 500 ಕ್ಕೂ ಹೆಚ್ಚು ಸೌಂದರ್ಯ ಲಹರಿಯನ್ನು ಪಾರಾಯಣ ಮಾಡಿರುವುದು ಈ ಬಾರಿಯ ವಿಷೇಷವಾಗಿದೆ. ಬೆಳಗಿನಿಂದಲೇ ದೇಗುಲದಲ್ಲಿ ಶಂಕರಾಚಾರ್ಯ, ನಂಜುಂಡೇಶ್ವರ ಮತ್ತು ಪಾರ್ವತಿ ವಿಗ್ರಹಗಳಿಗೆ ಅಭಿಷೇಕ, ವಿಶೇಷ ಪೂಜೆಯನ್ನು ನೆರವೇರಿಸಿ ದಕ್ಷೀಣಾಮೂರ್ತಿ ಸ್ತೋತ್ರ ಪಠಣವನ್ನು ಮಾಡಲಾಯಿತು.

Facebook Comments

Sri Raghav

Admin