ಸವಿತಾ ಸಮಾಜದ ಪ್ರತ್ಯೇಕ ನಿಗಮ ಸ್ಥಾಪನೆಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Beluru-2

ಬೇಲೂರು, ಅ.18- ಸವಿತಾ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ದಿ ನಿಗಮ ಸೇರಿದಂತೆ ವಿವಿಧ ಬೇಡಿಕಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೇಲೂರಿನಲ್ಲಿ ಸವಿತಾ ಸಮಾಜ ಸಂಘದಿಂದ ಶ್ರೀಚನ್ನಕೇಶವ ದೇವಾಲಯದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಪರಮೇಶ್‍ರವರಿಗೆ ಮನವಿ ಪತ್ರ ಸಲ್ಲಿಸಿದರು. ಚನ್ನಕೇಶವ ದೇವಾಲಯ ಸಮೀಪ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಸವಿತಾ ಸಮಾಜ ಸಂಘದ ಅಧ್ಯಕ್ಷ ನರಸಿಂಹಸ್ವಾಮಿ, ನಮ್ಮ ಸವಿತಾ ಸಮಾಜವು ಹಿಂದುಳಿದ ಜನಾಂಗಕ್ಕೆ ಸೇರಿದ್ದು, ಅದರಲ್ಲಿಯೂ ಅಲ್ಪ ಸಂಖ್ಯಾತರಾಗಿದ್ದೇವೆ. ನಮ್ಮ ಸಮಾಜಕ್ಕೆ ಸರ್ಕಾರಗಳಿಂದ ಇಲ್ಲಿವರೆಗೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಲು ಯಾವುದೆ ಸರ್ಕಾರಗಳು ಸಹಕಾರ ನೀಡುತ್ತಿಲ್ಲ ಎಂದು ವಿಷಾದಿಸಿದ್ದಾರೆ.

ಅಲ್ಲದೆ ನಮ್ಮ ಸಮಾಜವು ಸಹ ಅಹಿಂದ ವರ್ಗಕ್ಕೆ ಸೇರುವುದರಿಂದ ನಮ್ಮ ಸಮಾಜಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಹಾಗೂ ನಮ್ಮ ಸಮಾಜದ ಅಭಿವೃದ್ದಿಗೆ ಸರ್ಕಾರ ಪ್ರತ್ಯೇಕ ಸವಿತ ಸಮಾಜದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಸಮಾಜದ ಏಳಿಗೆಗೆ ಮುಂದಾಗಬೇಕೆಂದು ಮುಖ್ಯಮಂತ್ರಿಯವರನ್ನು ನಮ್ಮ ಸವಿತಾ ಸಮಾಜದಿಂದ ರಾಜ್ಯಾಧ್ಯಂತ ಒತ್ತಾಯಿಸಿ ಮನವಿ ಸಲ್ಲಿಸುತಿದ್ದೇವೆ. ಹಾಗೂ ನಮ್ಮ ಸಮಾಜಕ್ಕೆ ಮುಂದಿನ ದಿನಗಳಲ್ಲಿ  ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸ್ಥಾನಮಾನ ನೀಡಿ ಸಮಾಜದ ಅಭಿವೃದ್ದಿಗೆ ಮುಂದಾಗಬೇಕೆಂದು ಒತ್ತಾಯಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಮಹಿಳಾ ಅಧ್ಯಕ್ಷೆ ಸುಮಿತ್ರ ಮೋಹನ್, ತಾಲೂಕು ಪ್ರತಿನಿಧಿ ರಾಜು, ಹೋಬಳಿ ಅಧ್ಯಕ್ಷರಾದ ಲಕ್ಷ್ಮಣ್, ಪ್ರಕಾಶ್, ಶ್ರೀನಿವಾಸ್, ಸತೀಶ್, ದೇವೇಂದ್ರ, ಮಹೇಶ್, ಮಹಿಳಾ ಘಟಕದ ಶೀಲಾ, ಗೀತಾ, ಪುಷ್ಪಲತಾ ಇನ್ನಿತರರಿದ್ದರು.

Facebook Comments

Sri Raghav

Admin