ಗಡಿದಂ ಕೆರೆ ಕೋಡಿ : ತೆಂಬಿಟ್ಟಿನ ದೀಪದಾರತಿ

ಈ ಸುದ್ದಿಯನ್ನು ಶೇರ್ ಮಾಡಿ

Bagepalli

ಬಾಗೇಪಲ್ಲಿ, ಅ.21-   ಪಟ್ಟಣದ ಹೊರವಲಯದ ಗಡಿದಂ ಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಬಲಿಪಾಡ್ಯಮಿ ದಿನದಂದು ತಾಲ್ಲೂಕಿನ ಕೊಂಡಂವಾರಪಲ್ಲಿ ಗ್ರಾಮಸ್ಥರು ಗಂಗಮ್ಮ ದೇವಿಗೆ ತೆಂಬಿಟ್ಟಿನ ದೀಪದಾರತಿ ಮೆರವಣಿಗೆ ಮಾಡಿದರು. ತಾಲ್ಲೂಕಿನ ಕೊಂಡಂವಾರಿಪಲ್ಲಿ (ಜಗ್ಗನಾನಪಲ್ಲಿ) ಗ್ರಾಮದ ಪಕ್ಕದಲ್ಲಿರುವ ಗಡಿದಂ ಕೆರೆಯು ಕಳೆದ ದಿನಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಕೆರೆ ಕೋಡಿ ಬಿದ್ದಿದೆ.

ಇದರಿಂದ ಗ್ರಾಮದ ಮುಖ್ಯರಸ್ತೆಯಿಂದ ತಮಟೆ  ಬಾರಿಸುವುದರೊಂದಿಗೆ  ಕೆರೆಯ ಕಟ್ಟೆಯ ಗಂಗಮ್ಮ ದೇವಿ ದೇವಾಲಯದವರಿಗೂ ಮಹಿಳೆಯರು ತೆಂಬಿಟ್ಟಿನ ದೀಪದಾರತಿ ಮೆರವಣಿಗೆ ಮಾಡಿದರು. ಇದೇ ಸಂದರ್ಭದಲ್ಲಿ ಗಂಗಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು ತಂದಿದ್ದ ತೆಂಬಿಟ್ಟಿನ ದೀಪದಾರತಿಯನ್ನು ದೇವಿಗೆ ಬೆಳಗಿಸಿ, ಈ ಬಾರಿ ರೈತರಿಗೆ ಉತ್ತಮ ಫಸಲನ್ನು ನೀಡುವಂತೆ ವಿಶೇಷ ಹರಕೆ ಹೊತ್ತರು.

Facebook Comments

Sri Raghav

Admin