ನಿನ್ನೆ ನೀರು ಪಾಲಾಗಿದ್ದ ಮೂರು ಮಕ್ಕಳು ಶವವಾಗಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Chirtadurga

ಚಿತ್ರದುರ್ಗ,ಅ.21-ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹೆಗ್ಗೇರೆಯಲ್ಲಿ ನಿನ್ನೆ ಬೆಳಗ್ಗೆ ದೀಪಾವಳಿ ಹಬ್ಬದ ಖುಷಿಯಲ್ಲಿ ಈಜಾಡಲು ಹೋಗಿ ನೀರು ಪಾಲಾಗಿದ್ದ ಮೂವರು ಮಕ್ಕಳ ಮೃತದೇಹಗಳು ಇಂದು ಬೆಳಗ್ಗೆ ಸಿಕ್ಕಿವೆ. ಮೃತ ಮಕ್ಕಳನ್ನು ಕೆಂಪರಾಜು, ಕಾಂತರಾಜ್ ಮತ್ತು ಮಹಾಂತೇಶ್ ಎಂದು ಗುರುತಿಸಲಾಗಿದ್ದು , ಇವರೆಲ್ಲರೂ 14 ವರ್ಷ ವಯಸ್ಸಿನವರಾಗಿದ್ದು, ಹೆಗ್ಗೇರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದರು. ಹಬ್ಬದ ರಜೆ ಇದ್ದುದ್ದರಿಂದ ನಿನ್ನೆ ಮೂವರು ಮಕ್ಕಳೂ ಕೆರೆಯಲ್ಲಿ ಈಜಾಡಲು ತೆರಳಿದ್ದರು. ಈಜಾಡಲು ಕೆರೆಗೆ ಬಿದ್ದ ಮೂವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಪೋಲಿಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ  ಮಕ್ಕಳ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದರು. ನಿನ್ನೆ ಬೆಳಗ್ಗೆಯಿಂದ ಇಂದು ಮುಂಜಾನೆವರೆಗೂ ಶೋಧ ಕಾರ್ಯ ಮುಂದುವರೆಸಿದ್ದು , ಬೆಳಗ್ಗೆ 7.30ರ ಸುಮಾರಿಗೆ ಮೂವರು ಮಕ್ಕಳ ಮೃತದೇಹಗಳು ದೊರೆತಿವೆ. ಶ್ರೀರಾಂಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕಳ  ಹೆತ್ತವರು ಮತ್ತು ಬಂಧುಬಳಗದವರು ಮಕ್ಕಳ ಮೃತದೇಹಗಳ ಮುಂದೆ ರೋದಿಸುತ್ತಿದ್ದು , ಅವರ ಆಕ್ರಂದನ ಮುಗಿಲು ಮುಟ್ಟಿದೆ.

Facebook Comments