1600 ಖಾಸಗಿ ಬಸ್‍ಗಳಿಗೆ ಸ್ಟೇಜ್ ಕ್ಯಾರಿಯೇಜ್ ಪರ್ಮಿಟ್

ಈ ಸುದ್ದಿಯನ್ನು ಶೇರ್ ಮಾಡಿ

 

privet-bus

ಬೆಂಗಳೂರು, ಅ.21-ರಾಜ್ಯಾದ್ಯಂತ 1600 ಖಾಸಗಿ ಬಸ್‍ಗಳಿಗೆ ಸ್ಟೇಜ್ ಕ್ಯಾರಿಯೇಜ್ ಪರ್ಮಿಟ್ ನೀಡಲು ಸರ್ಕಾರ ಚಿಂತನೆ ನಡೆಸಿರುವುದು ತಿಳಿದುಬಂದಿದೆ. ಸ್ಟೇಜ್ ಕ್ಯಾರಿಯೇಜ್ ಪರ್ಮಿಟ್‍ನ್ನು ಇದುವರೆಗೂ ಬಂದ್ ಮಾಡಿದ್ದ ಸರ್ಕಾರ ಈಗ ಇದ್ದಕ್ಕಿದ್ದಂತೆ ಪರ್ಮಿಟ್ ನೀಡಲು ಚಿಂತನೆ ನಡೆಸಿರುವುದು ಆಶ್ಚರ್ಯ ಮೂಡಿಸಿದೆ.

ಒಂದು ಸ್ಥಳದಿಂದ ಮತ್ತೊಂದು ನಿರ್ದಿಷ್ಟ ಸ್ಥಳಕ್ಕೆ ಪ್ರಯಾಣಿಕರನ್ನು ಕರೆದೊಯ್ಯಲು ಮಾತ್ರ ಈ ಪರ್ಮಿಟ್ ಅಡಿ ಅವಕಾಶವಿತ್ತು. ಆದರೆ ಈಗ ಈ ಸ್ಟೇಜ್ ಕ್ಯಾರಿಯೇಜ್‍ಗೆ ಪರ್ಮಿಟ್ ಸಿಕ್ಕರೆ ಪ್ರಯಾಣಿಕರಿಗೆ ಪಿಕಪ್-ಡ್ರಾಪ್ ಒದಗಿಸಲು ಖಾಸಗಿ ಬಸ್‍ಗಳಿಗೆ ಅವಕಾಶ ಸಿಗುತ್ತದೆ. ಇದರ ಪರಿಣಾಮ ನೇರವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೇಲೆ ಬೀಳಲಿದೆ.ಬೆಂಗಳೂರಿನಿಂದ ಮೈಸೂರು ಮಾರ್ಗವನ್ನು ಉದಾಹರಣೆಯಾಗಿ ತೆಗೆದುಕೊಂಡು ಈ ಪರ್ಮಿಟ್ ಅಡಿ ರಾಮನಗರ, ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣಗಳಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರು ಇಳಿಯಲು, ಹತ್ತಲು ಅವಕಾಶವಿದೆ. ರಾಜ್ಯದ ಎಲ್ಲಾ ಪ್ರಮುಖ ಮಾರ್ಗಗಳಲ್ಲಿ ಇಂತಹ ಪರ್ಮಿಟ್ ಲಭ್ಯವಾದರೆ ಖಾಸಗಿಯವರಿಗೆ ಬಂಪರ್, ಕೆಎಸ್‍ಆರ್‍ಟಿಸಿ ಅವರಿಗೆ ಗ್ರೇಟ್‍ಲಾಸ್. ನಷ್ಟದಲ್ಲಿದ್ದ ಕೆಎಸ್‍ಆರ್‍ಟಿಸಿ ಕಷ್ಟಪಟ್ಟು ಮೇಲೆತ್ತಲಾಗಿದೆ. ಆಗುತ್ತಿದ್ದ ನಷ್ಟವನ್ನು ಕಡಿಮೆ ಮಾಡುತ್ತಾ ಬಂದು ಲಾಭ-ನಷ್ಟ ನಡುವೆ ಈ ಸಂಸ್ಥೆ ಸಮತೋಲನ ಹೊಂದಿತ್ತು. ಈಗ ಇಂತಹ ಪ್ಲ್ಯಾನ್‍ಗಳು ಜಾರಿಯಾದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಖಾಸಗಿಯವರಿಗೆ ಸ್ಟೇಜ್ ಕ್ಯಾರಿಯೇಜ್‍ಗೆ ಪರ್ಮಿಟ್ ಕೊಟ್ಟರೆ ಕೆಎಸ್‍ಆರ್‍ಟಿಸಿ ನಷ್ಟದ ಹಾದಿ ಹಿಡಿಯುತ್ತದೆ. ಇದೇ ಎಚ್ಚರಿಕೆಯಿಂದ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಸ್ಟೇಜ್ ಕ್ಯಾರಿಯೇಜ್‍ಗೆ ಅನುಮತಿಸಿರಲಿಲ್ಲ. ಆದರೆ ಈಗ ಅನುಮತಿ ನೀಡಲು ಮುಂದಾಗಿರುವುದನ್ನು ಗಮನಿಸಿದರೆ ಕೆಎಸ್‍ಆರ್‍ಟಿಸಿ ಸಂಸ್ಥೆಯ ಲಕ್ಷಾಂತರ ನೌಕರರ  ಬದುಕು ಅತಂತ್ರವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಧ್ಯಪ್ರವೇಶ ಮಾಡಿ ಸಂಸ್ಥೆಯ ಹಿತಕ್ಕೆ  ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

Facebook Comments