ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ : ಆರ್‍ಪಿಐ(ಎ)

ಈ ಸುದ್ದಿಯನ್ನು ಶೇರ್ ಮಾಡಿ

Gujatath-BJp
ಥಾಣೆ, ಅ.22-ಮುಂಬರುವ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಅದರ ಮಿತ್ರ ಪಕ್ಷವಾಗಿರುವ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅತವಾಳೆ) ಘೋಷಿಸಿದೆ. ಅಲ್ಲದೇ ಬಿಜೆಪಿ ಜೊತೆ ಜಗಳವಾಡದಂತೆಯೂ ಶಿವಸೇನೆಗೆ ಸಲಹೆ ಮಾಡಿದೆ.
ಥಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆರ್‍ಪಿಐ(ಎ) ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ರಾಮ್‍ದಾಸ್ ಅತವಾಳೆ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ ಸಂಖ್ಯೆ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವಂತೆ ಮಾಡಲು ನಾವು ಬೆಂಬಲ ನೀಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ, ಬಿಜೆಪಿ ಜೊತೆ ಅಗಾಗ ಕ್ಯಾತೆ ತೆಗೆಯುತ್ತಿರುವ ಶಿವಸೇನೆಗೆ ಕಿವಿಮಾತು ಹೇಳಿದ ಅವರು, ಕೇಸರಿ ಪಕ್ಷದೊಂದಿಗೆ ಜಗಳ ಮಾಡದಂತೆ ಮನವಿ ಮಾಡಿದರು. ಮುಂಬರುವ ಚುನಾವಣೆಗಳಲ್ಲಿ ಈ ಎರಡೂ ಪಕ್ಷಗಳು ಒಗ್ಗೂಡಿ ಹೋರಾಡುವಂತೆ ಸಲಹೆ ನೀಡಿದರು.

Facebook Comments

Sri Raghav

Admin