ನೂರಾರು ಬೋಗಸ್ ಕಂಪನಿಗಳಿಗೆ ಮುಂದೈತೆ ಮಾರಿ ಹಬ್ಬ..!

ಈ ಸುದ್ದಿಯನ್ನು ಶೇರ್ ಮಾಡಿ

Shell--02

ನವದೆಹಲಿ, ಅ.23-ಕೇಂದ್ರ ಸರ್ಕಾರದ ಕಳೆದ ವರ್ಷ ನೋಟು ಅಮಾನ್ಯೀಕರಣದ ನಂತರ ಬ್ಯಾಂಕ್‍ಗಳಲ್ಲಿ ಹಲವಾರು ಕೋಟಿ ರೂ.ಗಳ ಠೇವಣಿಗಳು ಮತ್ತು ಹಣ ಹಿಂಪಡೆದ ವಹಿವಾಟು ನಡೆಸಿರುವ ನೂರಾರು ನಕಲಿ ಮತ್ತು ಬೋಗಸ್ ಸಂಸ್ಥೆಗಳು (ಶೆಲ್ ಕಂಪನಿಗಳು) ಅಕ್ರಮ-ಅವ್ಯಹಾರಗಳಿಗಾಗಿ ಕ್ರಿಮಿನಲ್ ಕ್ರಮಗಳನ್ನು ಎದುರಿಸುವುದು ಈಗ ಅನಿವಾರ್ಯವಾಗಿದೆ. ಕಾಳಧನ ಮತ್ತು ಖೊಟ್ಟಿ ಕಂಪನಿಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಪ್ರಬಲ ಪ್ರಹಾರ ಇದಾಗಿದೆ.

ಪುನಶ್ಚೇತನಗೊಳಿಸಲಾದ ಕಂಪನಿಗಳ ಕಾಯ್ದೆಯಡಿ ಇಂಥ ವಂಚನೆಗಾಗಿ ಮೂರರಿಂದ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಬೇಕಾಗುತದೆ. ಅಲ್ಲದೇ ಅವ್ಯವಹಾರ ಅಪರಾಧದ ಮೌಲ್ಯಕ್ಕೆ ಸರಿ ಸಮಾನವಾಗಿ ದಂಡವನ್ನು ಪಾವತಿಸಬೇಕಾಗುತ್ತದೆ. ಕಂಪನಿಗಳ ಕಾಯ್ದೆ, 2013ರ ನಿಯಮಗಳನ್ನು ಉಲ್ಲಂಘಿಸಿ ಸತತ ಎರಡು ವರ್ಷಗಳಿಂದ ತಮ್ಮ ಆರ್ಥಿಕ ವಿವರಗಳು ಅಥವಾ ವಾರ್ಷಿಕ ಗಳಿಕೆ ಬಗ್ಗೆ ಮಾಹಿತಿ ಸಲ್ಲಿಸದ ಶೆಲ್ ಕಂಪನಿಗಳ ಎರಡು ಲಕ್ಷಕ್ಕೂ ಅಧಿಕ ನಿರ್ದೇಶಕರನ್ನು ಇದೇ ತಿಂಗಳು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಅನರ್ಹಗೊಳಿಸಿತ್ತು. ಈಗ ಇದರ ಬೆನ್ನಲ್ಲೇ ಮತ್ತೆ ಬೋಗಸ್ ಸಂಸ್ಥೆಗಳ ವಿರುದ್ಧ ಚಾಟಿ ಬೀಸಿದೆ.

ಕಳೆದ ತಿಂಗಳು ಕೇಂದ್ರ ಸರ್ಕಾರವು ಎರಡು ಲಕ್ಷಕ್ಕೂ ಅಧಿಕ ಸ್ಥಗಿತಗೊಂಡ ಕಂಪನಿಗಳ ಬ್ಯಾಂಕ್ ಖಾತೆಗಳ ಕಾರ್ಯ ನಿರ್ವಹಣೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು. ಕಾಳ ಧನ ಮತ್ತು ಶೆಲ್ ಕಂಪನಿಗಳ ವಿರುದ್ಧ ಹೋರಾಟದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿರುವ ಸಚಿವಾಲಯದ ಹಿರಿಯ ಅಧಿಕಾರಿಗಳು, ಇದರಿಂದ ಮತ್ತಷ್ಟು ಅಕ್ರಮ ಅವ್ಯಹಾರಗಳು ಬೆಳಕಿಗೆ ಬರಲಿವೆ ಎಂದು ಹೇಳಿದ್ದಾರೆ.

Facebook Comments

Sri Raghav

Admin