ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ : ಕೊಹ್ಲಿಗೆ ರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Ashwin--02

ನವದೆಹಲಿ, ಅ.23- ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು ಮುರಳಿ ವಿಜಯ್, ರವಿಚಂದ್ರನ್ ಅಶ್ವಿನ್, ರವೀಂದ್ರಾಜಡೇಜಾಗೆ ಸ್ಥಾನ ಕಲ್ಪಿಸಲಾಗಿದೆ. ಶ್ರೀಲಂಕಾ ವಿರುದ್ಧ ಆಗಷ್ಟ್ ನಲ್ಲಿ ಟೆಸ್ಟ್ ಮುಗಿದ ನಂತರ ಭಾರತ ತಂಡ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ (ಏಕದಿನ) ಸರಣಿಗಳಿಂದ ದೂರ ಉಳಿದಿದ್ದ ರವಿಚಂದ್ರನ್ ಅಶ್ವಿನ್‍ಗೆ ಸ್ಥಾನ ಕಲ್ಪಿಸಿದ್ದರೆ ರಣಜಿಯಲ್ಲಿ ಆಕರ್ಷಕ ದ್ವಿಶತಕ ಗಳಿಸಿದ ಜಡೇಜಾ ಮತ್ತು ಮೊಣಕೈ ನೋವಿನಿಂದ ಬಳಲಿದ್ದ ಮುರಳಿವಿಜಯ್ ತಂಡಕ್ಕೆ ಮರಳಿರುವುದರಿಂದ ತಂಡ ಮತ್ತಷ್ಟು ಬಲಗೊಂಡಿದೆ.  ಶ್ರೀಲಂಕಾ ವಿರುದ್ಧ ನವೆಂಬರ್ 16 ರಂದು ಮೊದಲ ಟೆಸ್ಟ್ ನಡೆದರೆ, ನವೆಂಬರ್ 24ರಂದು ಈಡನ್‍ಗಾರ್ಡನ್‍ನಲ್ಲಿ 2ನೆ ಟೆಸ್ಟ್ , ಡಿಸೆಂಬರ್ 2 ರಂದು ನವದೆಹಲಿಯಲ್ಲಿ ಅಂತಿಮ ಟೆಸ್ಟ್ ನಡೆಯಲಿದೆ. ನಂತರ 3 ಏಕದಿನ ಹಾಗೂ 3 ಟ್ವೆಂಟಿ-20 ಪಂದ್ಯಗಳು ನಡೆಯಲಿವೆ.

ತಂಡದ ವಿವರ:

ವಿರಾಟ್ ಕೊಹ್ಲಿ (ನಾಯಕ), ಅಜೆಂಕ್ಯಾ ರಹಾನೆ (ಉಪನಾಯಕ), ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಕುಲ್‍ದೀಪ್ ಯಾದವ್, ಆರ್.ಅಶ್ವಿನ್, ರವೀಂದ್ರಾಜಾಡೇಜಾ, ಭುವನೇಶ್ವರ್‍ಕುಮಾರ್, ಮೊಹಮ್ಮದ್ ಶಮಿ, ಚೇತೇಶ್ವರ್ ಪೂಜಾರ, ಕೆ.ಎಲ್.ರಾಹುಲ್, ಇಶಾಂತ್ ಶರ್ಮಾ, ಶಿಖರ್ ಧವನ್, ಉಮೇಶ್‍ಯಾದವ್, ಮುರಳಿವಿಜಯ್, ಹಾರ್ದಿಕ್ ಪಾಂಡ್ಯಾ.

ನ್ಯೂಜಿಲೆಂಡ್ ಸರಣಿಗೂ ತಂಡ ಪ್ರಕಟ:

ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟ್ವೆಂಟಿ -20 ಹಾಗೂ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸಲಾಗಿದ್ದು ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಸನ್‍ರೈಸರ್ಸ್‍ಹೈದ್ರಾಬಾದ್‍ನ ಸಿರಾಜ್ ಮೊಹಮ್ಮದ್ ಹಾಗೂ ಡೆಲ್ಲಿಡೇರ್‍ಡೆವಿಲ್ಸ್‍ನ ಶ್ರೇಯಸ್ ಐಯ್ಯರ್‍ಗೆ ಸ್ಥಾನವನ್ನು ಕಲ್ಪಿಸಲಾಗಿದೆ. ಹಿರಿಯ ಆಟಗಾರ ಅಶೀಸ್‍ನೆಹ್ರಾಗೂ 15 ರ ತಂಡದಲ್ಲಿ ಅವಕಾಶ ದೊರೆತಿದೆ.

ಮೊದಲ ಟ್ವೆಂಟಿ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಐಯ್ಯರ್, ದಿನೇಶ್ ಕಾರ್ತಿಕ್, ಮಹೇಂದ್ರಸಿಂಗ್ ಧೋನಿ (ವಿಕೆಟ್‍ಕೀಪರ್), ಹಾರ್ದಿಕ್‍ಪಾಂಡ್ಯಾ, ಅಕ್ಷರ್‍ಪಟೇಲ್, ಯಜುವೇಂದ್ರ ಚಹಾಲ್, ಕುಲ್‍ದೀಪ್ ಯಾದವ್, ಭುವನೇಶ್ವರ್‍ಕುಮಾರ್, ಜಸ್‍ಪ್ರೀತ್ ಬೂಮ್ರಾ, ಮೊಹಮ್ಮದ್ ಶಿರಾಜ್, ಅಶೀಶ್ ನೆಹ್ರಾ.

ಟೆಸ್ಟ್ ತಂಡ (2 ಪಂದ್ಯಗಳಿಗೆ):

ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರ, ಅಜೆಂಕ್ಯಾ ರಹಾನೆ, ರೋಹಿತ್ ಶರ್ಮಾ, ವೃದ್ಧಿಮಾನ್ ಸಾಹ, ರವಿಚಂದ್ರನ್ ಅಶ್ವಿನ್, ರವೀಂದ್ರಾಜಡೇಜಾ, ಕುಲ್‍ದೀಪ್ ಯಾದವ್, ಹಾರ್ದಿಕ್‍ಪಾಂಡ್ಯಾ, ಮೊಹಮ್ಮದ್ ಶಮಿ, ಉಮೇಶ್‍ಯಾದವ್, ಭುವನೇಶ್ವರ್‍ಕುಮಾರ್, ಇಶಾಂತ್‍ಶರ್ಮಾ.

ವಿರಾಟ್ ಕೊಹ್ಲಿಗೆ ರೆಸ್ಟ್:

ಮಂಬರುವ ದಕ್ಷಿಣ ಆಫ್ರಿಕಾದ ಸರಣಿಯ ದೃಷ್ಟಿಯಿಂದ ಸತತ ಸರಣಿಗಳನ್ನು ಆಡಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಹಾಗೂ ಶ್ರೀಲಂಕಾ ವಿರುದ್ಧದ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗುವುದು ಎಂದು ತಂಡದ ಆಯ್ಕೆಗಾರ ಎಂ.ಎಸ್.ಕೆ. ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin