ವಿಷ ಸೇವಿಸಿ ಗೃಹಿಣಿ  ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

channapattana-1

ಚನ್ನಪಟ್ಟಣ,ಅ.23-ಮಾನಸಿಕವಾಗಿ ಮನನೊಂದಿದ್ದ ಬೆಂಗಳೂರಿನ ಗೃಹಿಣಿ ಪಟ್ಟಣದ ಎಲೇಕೇರಿಯ ತೋಟದಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೌಮ್ಯ(28) ಅತ್ಮಹತ್ಯೆಗೆ ಶರಣಾಗಿರುವ ಗೃಹಿಣಿಯಾಗಿದ್ದು, ಇವರು ಬೆಂಗಳೂರು ಮಲ್ಲೇಶ್ವರಂ ವಾಸಿ ಶಿವಕುಮಾರ್ ಎಂಬುವವರ ಪತ್ನಿಯಾಗಿದ್ದು, ಈಕೆ ತನ್ನ 3 ವರ್ಷದ ಮಗುವಿನೊಂದಿಗೆ ಬೆಂಗಳೂರಿನಿಂದ ಪಟ್ಟಣಕ್ಕೆ ಆಗಮಿಸಿದ್ದು, ಪಟ್ಟಣದ ಎಲೇಕೇರಿ ಕರಿಯಪ್ಪಎಂಬುವವರ ತೋಟದಲ್ಲಿ ಕೆಲ ಸಮಯ ಕಾಲ ಕಳೆದು ತಾನು ಸಾಯುತ್ತಿರುವುದಾಗಿ ಪತಿಗೆ ಮೊಬೈಲ್ ಕರೆಯಲ್ಲಿ ತಿಳಿಸಿದ್ದು, ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನ್ನ ತಾಯಿಯ ಸಾವಿನಿಂದ ಕಂಗೆಟ್ಟ ಮಗು ರಾತ್ರಿಪೂರ ಅಳುತ್ತಾ ಸುಸ್ತಾಗಿದ್ದು, ಬೆಳಿಗ್ಗೆ ಆ ಮಾರ್ಗವಾಗಿ ಬಂದ ಸಾರ್ವಜನಿಕರಿಂದ ಘಟನೆ ಬೆಳಕಿಗೆ ಬಂದಿದೆ. ತಾನು ಸಾಯುವ ಬಗ್ಗೆ ಸೌಮ್ಯ ಡೆತ್‍ನೋಟ್ ಬರೆದಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Facebook Comments

Sri Raghav

Admin