ಆದಿ ಶಂಕರಾಚಾರ್ಯರ 108 ಅಡಿ ಬೃಹತ್ ಪ್ರತಿಮೆ ಸ್ಥಾಪನೆಗೆ ಏಕಾತ್ಮ ಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

Ektam-Yatra-02

ಭೋಪಾಲ್, ಅ.24-ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರದಲ್ಲಿ ಮಹಾ ಸಂತ ಶ್ರೀ ಆದಿ ಶಂಕರಚಾರ್ಯರ 108 ಅಡಿಗಳ ಬೃಹತ್ ಪ್ರತಿಮೆ ಸ್ಥಾಪನೆಯಾಗಲಿದೆ. ಇದಕ್ಕಾಗಿ ಲೋಹದ ತುಣುಕುಗಳನ್ನು ಸಂಗ್ರಹಿಸಲು ಏಕಾತ್ಮ ಯಾತ್ರೆಯನ್ನು ಕೈಗೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ.
ರಾಜಧಾನಿ ಭೋಪಾಲ್‍ನಿಂದ 290 ಕಿ.ಮೀ. ದೂರದಲ್ಲಿರುವ ದೇವಾಲಯಗಳ ನಗರಿ ಓಂಕಾರೇಶ್ವರದಲ್ಲಿ ನರ್ಮದಾ ನದಿ ದಂಡೆಯಲ್ಲಿ 8ನೇ ಶತಮಾನದ ತತ್ತ್ವಜ್ಞಾನಿ ಶಂಕರಾಚಾರ್ಯರ ಬೃತಹ್ ಪ್ರತಿಮೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಶಿವನ 12 ಪ್ರಸಿದ್ಧ ಜೋತಿರ್ಲಿಂಗ ಮಂದಿರಗಳಲ್ಲಿ ಒಂದಾದ ಓಂಕಾರೇಶ್ವರ ಪಟ್ಟಣದ ಧಾರ್ಮಿಕ ಆಕರ್ಷಣೆಯನ್ನು ಈ ಪುತ್ಥಳಿ ಮತ್ತಷ್ಟು ಹೆಚ್ಚಿಸಲಿದೆ.

ಇದೇ ಉದ್ದೇಶಕ್ಕಾಗಿ ಏಕಾತ್ಮ ಯಾತ್ರೆಯನ್ನು ಡಿಸೆಂಬರ್ ಮತ್ತು ಜನವರಿಯಲ್ಲಿ ನಡೆಸಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಯಾತ್ರೆಯಲ್ಲಿ ಅನೇಕ ಧಾರ್ಮಿಕ ಮುಖಂಡರು, ಸಾಧು-ಸಂತರು, ಜನ ಪ್ರತಿನಿಧಿಗಳು, ಮಂತ್ರಿ ಮಹೋದಯರು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳುವರು. 108 ಅಡಿಗಳ ದೊಡ್ಡ ಪ್ರತಿಮೆ ಸ್ಥಾಪನೆಗೆ ಬೇಕಾದ ಲೋಹದ ತುಣುಕುಗಳನ್ನು ಇದೇ ಸಂದರ್ಭದಲ್ಲಿ ಸಂಗ್ರಹಿಸಲಾಗುವುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರಪ್ರದೇಶದ ಆಯೋಧ್ಯೆಯ ಸರಯೂ ನದಿ ದಂಡೆಯಲ್ಲಿ ಬೃಹತ್ ಶ್ರೀರಾಮನ ಪುತ್ಥಳಿ ಸ್ಥಾಪನೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಸ್ಥಾಪನೆಯೂ ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

Facebook Comments

Sri Raghav

Admin