ದೆಹಲಿಯ ಪ್ರಸಿದ್ಧ ಕಮಲ ಮಾರ್ಕೆಟ್ ಧಗಧಗ, 50 ಅಂಗಡಿ ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Fire--02

ನವದೆಹಲಿ, ಅ.24-ರಾಜಧಾನಿ ದೆಹಲಿಯ ಪ್ರಸಿದ್ಧ ಕಮಲ ಮಾರ್ಕೆಟ್ ಪ್ರದೇಶದಲ್ಲಿ ನಿನ್ನೆ ಮಧ್ಯರಾತ್ರಿ ಅಗ್ನಿ ದುರಂತ ಸಂಭವಿಸಿದ್ದು, ಅನೇಕ ಅಂಗಡಿಗಳು ಮತ್ತು ಗೋದಾಮುಗಳು ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ.  ಬೆಂಕಿ ದುರಂತದ ಬಗ್ಗೆ ನಿನ್ನೆ ಮಧ್ಯರಾತ್ರಿ ಅಗ್ನಿಶಾಮಕ ಇಲಾಖೆಗೆ ದೂರವಾಣಿ ಕರೆ ಬಂದ ನಂತರ ವಾಹನಗಳೊಂದಿಗೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ದೀರ್ಘಕಾಲದ ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ 5.10ರಲ್ಲಿ ಅಗ್ನಿ ತಹಬಂದಿಗೆ ಬಂದಿತು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‍ಎಸ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಆನಾಹುತದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ 50ಕ್ಕೂ ಹೆಚ್ಚು ಅಂಗಡಿಗಳು ಮತ್ತು ಉಗ್ರಾಣಗಳು ಸುಟ್ಟು ಭಸ್ಮವಾಗಿವೆ. ಕೋಟ್ಯಂತರ ರೂ.ಗಳ ಮೌಲ್ಯದ ವಸ್ತುಗಳು ಕರಕಲಾಗಿವೆ ಎಂದು ಅವರು ಹೇಳಿದ್ದಾರೆ.  ಲೂಧಿಯಾನದಲ್ಲೂ ಅಗ್ನಿ ದುರಂತ : ಪಂಜಾಬ್‍ನ ಲೂಧಿಯಾನದ ಶೃಂಗಾರ್ ಚಿತ್ರಮಂದಿರದ ಬಳಿ ಇರುವ ಹೊಸೈರಿ(ವಸ್ತ್ರ ತಯಾರಿಕಾ) ಘಟಕದಲ್ಲಿ ಇಂದು ಬೆಳಗ್ಗೆ ದೊಡ್ಡ ಪ್ರಮಾಣದ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಅಪಾರ ನಷ್ಟ ಉಂಟಾಗಿದೆ. ಓಲ್ಡ್ ಸಮ್ರಾಲಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಕೆನ್ನಾಲಿಗೆಯನ್ನು ನಿಯಂತ್ರಿಸಿದರು. ಯಾರಿಗೂ ಗಾಯಗಳಾಗಿಲ್ಲ.

Facebook Comments

Sri Raghav

Admin