ಪೊಲೀಸರ ಬೈಕ್‍ಗೇ ಬೆಂಕಿ ಇಟ್ಟಿದ್ದ ಆಸಾಮಿ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Bike--02

ಬಂಗಾರಪೇಟೆ, ಅ.24-ಕೆರೆ ಕೋಡಿ ಹರಿದಿದ್ದ ಹಿನ್ನಲೆಯಲ್ಲಿ ಕೋಣವನ್ನು ಬಲಿ ಕೊಡಲು ಮುಂದಾದಾಗ ಅದನ್ನ ಪೊಲೀಸರು ತಡೆದರು ಎಂಬ ಆಕ್ರೋಶದಿಂದ ಪೊಲೀಸ್ ಬೈಕ್‍ಗೆ ಬೆಂಕಿ ಇಟ್ಟು ಪರಾರಿಯಾಗಿದ್ದ ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಕಸಬಾ ವ್ಯಾಪ್ತಿಯ ಗುಟ್ಟಹಳ್ಳಿ ಗ್ರಾಮದಲ್ಲಿ ಇಂತಹ ಘಟನೆ ನಡೆದಿದ್ದು, ಬಂದಿತ ಆರೋಪಿ ಅದೇ ಗ್ರಾಮದ ರಮೇಶ್ (30) ಎಂದು ಹೇಳಲಾಗಿದೆ. ಕಳೆದ 12 ವರ್ಷಗಳ ನಂತರ ಗುಟ್ಟಹಳ್ಳಿ ಕೆರೆ ತುಂಬಿ ಕೋಡಿ ಹರಿದಿತ್ತು.ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಕೆರೆಗೆ ಪೂಜೆಯನ್ನು ಸಲ್ಲಿಸಿ ಕೋಣವನ್ನು ಬಲಿ ಕೊಡಲು ಸಿದ್ದತೆ ಮಾಡಿಕೊಂಡಿದ್ದರು.ಈ ವಿಷಯ ಸ್ಥಳೀಯ ಪೊಲೀಸರಿಗೆ ಗೊತ್ತಾಗಿ ಕೋಣ ಬಲಿ ಕೊಡದಂತೆ ಮುಂಜಾಗ್ರತೆ ತೆಗೆದುಕೊಂಡು ಕೆರೆ ಸಮೀಪ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು.

ಬಂದೋಬಸ್ತ್‍ಗಾಗಿ ಗುಡ್ ಮಾರ್ನಿಂಗ್ ಗಸ್ತು ಮಾಡುತ್ತಿದ್ದ ಪೇದೆ ಇಲಾಖೆಯ ಪಲ್ಸರ್ ಬೈಕ್ ಮುಖಾಂತರ ಸ್ಥಳಕ್ಕೆ ಬೇಟಿ ನೀಡಿದ್ದರು. ಕೆರೆಯಿಂದ ಸುಮಾರು ದೂರದಲ್ಲಿ ಕಲ್ಲಿನ ಗುಡ್ಡೆ ಮೇಲೆ ನಿಲ್ಲಿಸಿ ಸ್ಥಳಕ್ಕೆ ಹೋಗಿದ್ದರು. ಅದೇ ಸಮಯದಲ್ಲಿ ಕೋಣ ಬಲಿ ಕೊಡಲು ಅನುಮತಿ ನೀಡದ ಕಾರಣ ಆಕ್ರೋಷಗೊಂಡು ಪಲ್ಸರ್ ಬೈಕ್‍ಗೆ ಬೆಂಕಿ ಇಡಲಾಗಿತ್ತು. ಬೈಕ್ ಬೆಂಕಿಗೆ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಈ ಘಟನೆಯಿಂದ ಪೊಲೀಸರಿಗೆ ತಲೆನೋವು ಉಂಟಾಗಿತ್ತು. ಸ್ಥಳೀಯರಲ್ಲಿ ತೀವ್ರ ಕುತೂಹಲ ಕೆರಳಿಸುವಂತೆ ಮಾಡಿತ್ತು.ಹೇಗಾದರು ಮಾಡಿ ಘಟನೆಗೆ ಸಂಬಂಧಿಸಿದ ದುಷ್ಕರ್ಮಿಯನ್ನು ಪತ್ತೆ ಹಚ್ಚುವ ಸವಾಲು ಪೊಲೀಸರಿಗೆ ಇತ್ತು.

ಈ ಮಧ್ಯೆ ಗುಟ್ಟಹಳ್ಳಿ ಗ್ರಾಮದ ನಿವಾಸಿ ರಮೇಶ್, ಹಲವು ರಾಜಕೀಯ ನಾಯಕರೊಂದಿಗೆ ಠಾಣೆಗೆ ಆಗಮಿಸಿ ಬೈಕ್‍ಗೆ ತಾನೇ ಬೆಂಕಿ ಇಟ್ಟಿರುವುದಾಗಿ ಹೇಳಿಕೆ ನೀಡಿ ಶರಣಾಗಿದ್ದಾನೆ. ಈ ಹಿನ್ನಲೆಯಲ್ಲಿ ಆರೋಪಿ ರಮೇಶ್‍ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Facebook Comments

Sri Raghav

Admin