ಸರಣಿ ಉಳಿಸಿಕೊಳ್ಳಲು ಕೊಹ್ಲಿ ಮಾಸ್ಟರ್ ಪ್ಲಾನ್ ..!

ಈ ಸುದ್ದಿಯನ್ನು ಶೇರ್ ಮಾಡಿ

virat

ಪುಣೆ, ಅ. 24- ಭಾರತ ನೆಲದಲ್ಲಿ ಆಡಿದ ಸರಣಿಗಳಲ್ಲಿ ಇದುವರೆಗೂ ಸರಣಿ ಜಯಿಸದ ನ್ಯೂಜಿಲೆಂಡ್ ತಂಡ ಈಗ ಪ್ರತೀಕಾರ ತೀರಿಸಿಕೊಳ್ಳಲು ಕಾತರದಿಂದಿದ್ದರೆ, ಆ ದಾಖಲೆಯನ್ನು ಮುಂದುವರಿಸಲು ನಾಳಿನ ಪಂದ್ಯವನ್ನು ಒತ್ತಡ ನಡುವೆಯೂ ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವತ್ತ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮಾಸ್ಟರ್‍ಪ್ಲ್ಯಾನ್ ರೂಪಿಸಿದ್ದಾರೆ. ಅಭ್ಯಾಸ ಪಂದ್ಯವೂ ಸೇರಿದಂತೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿ ತಂಡಕ್ಕೆ ಭರ್ಜರಿ ತಂದುಕೊಟ್ಟಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳಾದ ರಾಸ್ ಟೇಲರ್ ಹಾಗೂ ಲಾಥಮ್ ಅವರ ರನ್ ದಾಹಕ್ಕೆ ಕಡಿವಾಣ ಹಾಕುವತ್ತಲೂ ಕೂಡ ಬ್ಲೂಬಾಯ್ಸ್ ಚಿತ್ತ ಹರಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ವಹಿಸಿಕೊಂಡ ನಂತರ ಸತತ ಆರು ಸರಣಿಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ವಿರಾಟ್ ಕೊಹ್ಲಿ ಸೋಲಿನಲ್ಲೂ ಆಕರ್ಷಕ ಶತಕ ಗಳಿಸುವ ಮೂಲಕ ನ್ಯೂಜಿಲೆಂಡ್‍ನ ಬೌಲರ್‍ಪಡೆಯನ್ನು ಸಮರ್ಥವಾಗಿ ಎದುರಿಸಿದ್ದು ನಾಳೆಯ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ನೀಡುವ ಭರವಸೆಯನ್ನು ಮೂಡಿಸಿದ್ದಾರೆ.

ಆರಂಭಿಕ ಆಟಗಾರ ಕೊರತೆ:

2015ರ ವಿಶ್ವಕಪ್‍ನಿಂದಲೂ ಆರಂಭಿಕ ಆಟಗಾರರ ರೋಹಿತ್‍ಶರ್ಮಾ ಹಾಗೂ ಶಿಖರ್ ಧವನ್ ಅವರು ಉತ್ತಮ ಪ್ರದರ್ಶನವನ್ನು ತೋರುತ್ತಾ ಬಂದಿದ್ದರೂ ಕೂಡ ಕೆಲವು ನಿರ್ಣಾಯಕ ಪಂದ್ಯಗಳಲ್ಲಿ ಉತ್ತಮ ಜೊತೆಯಾಟ ಆಡುವಲ್ಲಿ ಎಡುತ್ತಿರುವುದರಿಂದ ನಾಳಿನ ಪಂದ್ಯದಲ್ಲಿ ಬ್ಯಾಟಿಂಗ್ ಲೆನ್‍ಆಪ್‍ನಲ್ಲಿ ಬದಲಾವಣೆ ಮಾಡುವ ಯೋಜನೆಯನ್ನು ಕೊಹ್ಲಿ ರೂಪಿಸಿದ್ದಾರೆ. ಇದೇ ಅಲ್ಲದೆ ಕಳೆದ ಪಂದ್ಯದಲ್ಲಿ ಕೇದಾರ್‍ಜಾಧವ್ ಅತಿ ಹೆಚ್ಚು ರನ್ ಗಳಿಸುವಲ್ಲಿ ಎಡವಿರುವುದರಿಂದ ಆ ಸ್ಥಾನದಲ್ಲಿ ಕನ್ನಡಿಗ ಮನೀಷ್ ಪಾಂಡೆಯನ್ನು ಆಡಿಸುವುದಲ್ಲದೆ, 5ನೆ ಕ್ರಮಾಂಕದಲ್ಲಿ ದಿನೇಶ್‍ಕಾರ್ತಿಕ್ ಬದಲು ಅಲ್‍ರೌಂಡರ್ ಹಾರ್ದಿಕ್‍ಪಾಂಡ್ಯಾರಿಗೆ ಬ್ಯಾಟಿಂಗ್ ಬಡ್ತಿ ನೀಡುವ ಯೋಜನೆಯನ್ನು ರೂಪಿಸಲಾಗಿದೆ.

ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಿದ್ದ ನ್ಯೂಜಿಲೆಂಡ್‍ನ ಬೋಲ್ಟ್ , ಸೌಥಿ ಬೌಲಿಂಗ್‍ಅನ್ನು ಹೇಗೆ ಎದುರಿಸಬೇಕೆಂಬ ಬಗ್ಗೆಯೂ ತರಬೇತುದಾರ ರವಿಶಾಸ್ತ್ರೀ ಹಾಗೂ ನಾಯಕ ವಿರಾಟ್ ಕೊಹ್ಲಿ ತಂತ್ರ ರೂಪಿಸಿದ್ದಾರೆ.

ಬೌಲಿಂಗ್‍ನತ್ತ ಚಿತ್ತ:

ಕಳೆದ ಸರಣಿಗಳಲ್ಲಿ ಬ್ಯಾಟಿಂಗ್‍ಗಿಂತ ಬೌಲಿಂಗ್ ವಲಯದಲ್ಲೇ ತಮ್ಮ ಚಮತ್ಕಾರವನ್ನು ಪ್ರದರ್ಶಿಸಿದ್ದ ಟೀಂ ಇಂಡಿಯಾದ ಬೌಲಿಂಗ್ ಪಡೆ ವಾಂಖೆಡೆ ಕ್ರೀಡಾಂಗಣದಲ್ಲಿ ಜಾದೂ ಮಾಡದಿದ್ದರೂ ಕೂಡ ನಾಳೆಯ ಪಂದ್ಯದಲ್ಲಿ ಮರಳಿ ಲಯಕಂಡುಕೊಳ್ಳುವ ಲಕ್ಷಣಗಳಿವೆ. ವೇಗದ ಬೌಲರ್‍ಗಳಾದ ಭುವನೇಶ್ವರ್‍ಕುಮಾರ್, ಜಸ್‍ಪ್ರೀತ್ ಬೂಮ್ರಾ ಜೊತೆಗೆ ಸ್ಪಿನ್ನರ್‍ಗಳಾದ ಯಜುವೇಂದ್ರ ಚಾಹಲ್, ಕುಲ್‍ದೀಪ್‍ಯಾದವ್ ಕೂಡ ತಮ್ಮ ಬೌಲಿಂಗ್ ಜಾದೂ ಪ್ರದರ್ಶಿಸಿದರೆ ಭಾರತ ತಂಡವು ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬಹುದು.

Facebook Comments

Sri Raghav

Admin