ಚಲಿಸುತ್ತಿದ್ದ ರೈಲಿನಿಂದ ಮೂವರು ಸಹೋದರಿಯರ ತಳ್ಳಿದ ಚಿಕ್ಕಪ್ಪ, ಬಾಲಕಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Train--01

ಲಕ್ನೋ, ಅ.25-ಉತ್ತರಪ್ರದೇಶದ ಲಕ್ನೋ ಬಳಿ ಚಲಿಸುತ್ತಿದ್ದ ರೈಲಿನಿಂದ ಮೂವರು ಅಪ್ರಾಪ್ತ ಸಹೋದರಿಯರನ್ನು ಆಕೆಯ ಚಿಕ್ಕಪ್ಪನೇ ಹೊರಕ್ಕೆ ತಳ್ಳಿದ ಹೀನ ಘಟನೆಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ರಾಜಧಾನಿ ಲಕ್ನೋದಿಂದ 90 ಕಿ.ಮೀ. ದೂರದಲ್ಲಿರುವ ಸೀತಾಪುರದ ಬಳಿ ಅಮೃತಸರ-ಸಹರ್ಸಾ ಎಕ್ಸ್‍ಪ್ರೆಸ್ ರೈಲಿನಲ್ಲಿ ಈ ಘೋರ ಘಟನೆ ನಡೆದಿದೆ. ಚಿಕ್ಕಪ್ಪನ ನಿರ್ದಯ ಕೃತ್ಯಕ್ಕೆ ಮುನಿಯಾ(7)ಎಂಬ ಬಾಲಕಿ ಬಲಿಯಾಗಿದ್ದು, ಆಕೆಯ ತಂಗಿ ಶಮೀಮ್(4) ಹಾಗೂ ಅಕ್ಕ ಅಲ್ಗನ್ (9) ತೀವ್ರ ಗಾಯಗೊಂಡಿದ್ದಾರೆ.

ರೈಲ್ವೆ ಹಳಿಯ ಪಕ್ಕದಲ್ಲಿ ಕೆಲವು ಕಿಲೋಮೀಟರ್‍ಗಳ ಅಂತರದಲ್ಲಿ ಈ ಸಹೋದರಿಯರು ಬಿದ್ದು ನರಳಾಡುತ್ತಿದ್ದರು. ತೀವ್ರ ಗಾಯಗೊಂಡ ಮುನಿಯಾ ಸ್ಥಳದಲ್ಲೇ ಕೊನೆಯುಸಿರೆಳೆದಳು.  ಆರಂಭದಲ್ಲಿ ಇದು ತನ್ನ ತಂದೆಯೇ ಎಂದು ಹೇಳಿಕೆ ನೀಡಿದ್ದ ಅಲ್ಗನ್ ನಂತರ ಚಿಕ್ಕಪ್ಪ ನಮ್ಮನ್ನು ರೈಲಿನಿಂದ ಹೊರಗೆ ದಬ್ಬಿದರು ಎಂದು ಹೇಳಿಕೆ ನೀಡಿದ್ದಾಳೆ. ಈ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಈ ಮೂವರು ಮಕ್ಕಳನ್ನು ಕೊಲ್ಲುವುದು ಆತನ ಉದ್ದೇಶವಾಗಿತ್ತು. ಈ ಮೂವರು ಬಾಲಕಿಯರು ತುಂಬಾ ಕೃಶರಾಗಿದ್ದು, ಕೆಲವು ದಿನಗಳಿಂದ ಆಹಾರ ಸೇವಿಸಿಲ್ಲ ಎಂದು ರೈಲ್ವೆ ಪೊಲೀಸ್ ಉನ್ನತಾಧಿಕಾರಿ ವಿನೋದ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin