ಭಾರತದಲ್ಲಿ 4 ಗಂಟೆಗೆ ಒಬ್ಬ ಅಪ್ರಾಪ್ತೆ ರೇಪ್…!

ಈ ಸುದ್ದಿಯನ್ನು ಶೇರ್ ಮಾಡಿ

Girl-Rape--02

ನವದೆಹಲಿ/ಬೆಂಗಳೂರು, ಅ.25-ಭಾರತದಲ್ಲಿ ಪ್ರತಿ ನಾಲ್ಕು ಗಂಟೆಗೆ ಒಬ್ಬ ಅಪ್ರಾಪ್ರರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿಯೊಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿಯ ವಾರ್ಷಿಕ ಅಂಕಿ ಅಂಶ ಮಾಹಿತಿಯಿಂದ ಬಹಿರಂಗಗೊಂಡಿದೆ.  ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಪ್ರತಿ ನಾಲ್ಕು ತಾಸಿಗೆ ನಡೆಯುವ ಒಂದು ಅತ್ಯಾಚಾರ ಪ್ರಕರಣದಲ್ಲಿ ಕನಿಷ್ಠ ಒಬ್ಬ ಬಾಲಾಪರಾಧಿ ಬಂಧಿತನಾಗುತ್ತಿದ್ದಾನೆ. ಅದೇ ರೀತಿ ಪ್ರತಿ ಎರಡು ಗಂಟೆಗೊಮ್ಮೆ ಮಹಿಳೆಯ ಮೇಲೆ ಹಲ್ಲೆ ನಡೆಸುವ ಒಬ್ಬ ಅಪಾಪ್ತನನ್ನು ಬಂಧಿಸಲಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ಅಂಕಿ ಅಂಶ ಮಾಹಿತಿಯು ಇನ್ನೂ ಕೆಲವು ಆತಂಕಕಾರಿ ಸಂಗತಿಗಳನ್ನು ಬಯಲು ಮಾಡಿದೆ. ಕಳೆದ ವರ್ಷ ಜನವರಿ 1 ಮತ್ತು ಡಿಸೆಂಬರ್ 31ರ ನಡುವಣ ಅವಧಿಯಲ್ಲಿ ಅತ್ಯಾಚಾರ ಪ್ರಕರಣಗಳ ಸಂಬಂಧ 2,054 ಬಾಲಾಪರಾಧಿಗಳನ್ನು ಬಂಧಿಸಲಾಗಿದೆ (ಪ್ರತಿ 4 ಗಂಟೆ 20 ನಿಮಿಷಕ್ಕೆ ಒಂದು ಅತ್ಯಾಚಾರ) ಹಾಗೂ ಮಹಿಳೆಯರ ಮೇಲೆ ವಿವಿಧ ಕಾರಣಗಳಿಗಾಗಿ ಹಲ್ಲೆ ಮಾಡಿದ 1,627 ಅಪ್ರಾಪ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕಳೆದ ವರ್ಷದ ಅಂಕಿ ಅಂಶ ಮಾಹಿತಿ ಇದಾಗಿದ್ದು, 2017ರ ಅತ್ಯಾಚಾರ, ಹಲ್ಲೆ ಮೊದಲಾದ ಬಾಲಾಪರಾಧಿಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಬಾಲಾಪರಾಧಗಳು ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದಕ್ಕೆ ಕೇವಲ ಸಾಮಾಜಿಕ ಸಮಸ್ಯೆ ಮಾತ್ರ ಕಾರಣವಲ್ಲ. ಇದಕ್ಕೆ ಮಾನಸಿಕ ನ್ಯೂನತೆಗಳೂ ಕೂಡ ಕಾರಣ ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ ಡಾ. ಸಮತಾ ದೇಶಮಾನೆ.
ಯೌವ್ವನಾವಸ್ಥೆಯಲ್ಲಿರುವ ಮಕ್ಕಳಿಗೆ ಮುಂದಿನ ಪರಿಣಾಮಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದೇ ಈ ಕೃತ್ಯಗಳಲ್ಲಿ ತೊಡಗುತ್ತಾರೆ. ಇಂಥ ದುಷ್ಟರಿಣಾಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಮನಶಾಸ್ತ್ರಜ್ಞರಾದ ಸುಲತಾ ಶೆಣ್ಯೆ ಮತ್ತು ಬಿ.ಎನ್.ಗಂಗಾಧರ್ ಪ್ರತಿಪಾದಿಸಿದ್ದಾರೆ.

Facebook Comments

Sri Raghav

Admin