ರಾಷ್ಟ್ರಪತಿಗಳಿಂದ ಉತ್ತಮ ಸರ್ಕಾರವೆಂದು ಹೇಳಿಸಲಾಗಿದೆ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa--01

ಬೆಂಗಳೂರು,ಅ.25-ರಾಜ್ಯದಲ್ಲಿ ಕೆಟ್ಟ ಸರ್ಕಾರವಿದ್ದರೂ ಉತ್ತಮ ಸರ್ಕಾರ ಎಂದು ರಾಷ್ಟ್ರಪತಿಗಳಿಂದ ಹೇಳಿಸಲಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.  ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ ನಡೆದ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಅವರು ರಾಜ್ಯ ಸರ್ಕಾರ ಬರೆದುಕೊಟ್ಟಿರುವ ಭಾಷಣವನ್ನು ಜಂಟಿ ಅಧಿವೇಶನದಲ್ಲಿ ಓದಿದ್ದಾರೆ ಅಷ್ಟೆ. [ ವಿಧಾನಸೌಧ ವಜ್ರಮಹೋತ್ಸವ (Live Updates) ]

ರಾಜ್ಯ ಸರ್ಕಾರ ಭಾಷಣದ ಪ್ರತಿಯನ್ನು ತಡವಾಗಿ ನೀಡಿದ್ದರಿಂದ ರಾಷ್ಟ್ರಪತಿಗಳು ಜಂಟಿ ಅಧಿವೇಶನಕ್ಕೆ ಆಗಮಿಸುವುದು ವಿಳಂಬವಾಯಿತು ಎಂದು ಆಕ್ಷೇಪಿಸಿದರು. ವಜ್ರ ಮಹೋತ್ಸವ ಆಚರಣೆ ಗೊಂದಲಮಯವಾಗಿದೆ. ಆಚರಣೆಗೆ ಮಾಡುವ ವೆಚ್ಚದ ಬಗ್ಗೆಯೂ ಕೂಡ ಆಕ್ಷೇಪ ವ್ಯಕ್ತವಾಗಿತ್ತು ಎಂದು ಹೇಳಿದರು.

Facebook Comments

Sri Raghav

Admin