ವಿಧಾನಸೌಧದ ವಜ್ರ ಮಹೋತ್ಸವದಲ್ಲಿ ಶಾಸಕರು-ಪೊಲೀಸರ ನಡುವೆ ವಾಗ್ವಾದ

ಈ ಸುದ್ದಿಯನ್ನು ಶೇರ್ ಮಾಡಿ

Vidhana--01

ಬೆಂಗಳೂರು,ಅ.25-ವಿಧಾನಸೌಧದ ವಜ್ರ ಮಹೋತ್ಸವಕ್ಕೆ ಶಾಸಕರನ್ನೂ ಒಳಗೆ ಬಿಡಲು ಪೊಲೀಸರು ತಕರಾರು ತೆಗೆದ ಘಟನೆ ನಡೆಯಿತು. ಕೆಂಗಲ್ ಪ್ರವೇಶದ್ವಾರದಲ್ಲಿ ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿ ಅವರನ್ನು ವಿಶೇಷ ಪಾಸ್ ಇಲ್ಲದ ಕಾರಣ ಪೊಲೀಸರು ಒಳಬಿಡಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಶಾಸಕರ ನಡುವೆ ಜಟಾಪಟಿ ನಡೆಯಿತು.

ಶಾಸಕರ ಐಡಿ ಕಾರ್ಡ್ ತೋರಿಸಿದರೂ ಪೊಲೀಸರು ಒಳಬಿಡಲಿಲ್ಲ. ನಂತರ ಶಾಸಕ ಮಾಮನಿ ವಾಪಸ್ ಹೋಗುವ ಬೆದರಿಕೆ ಹಾಕಿದ ಮೇಲೆ ಪೊಲೀಸರು ಪ್ರವೇಶಕ್ಕೆ ಅವಕಾಶ ನೀಡಿದರು. ವಜ್ರ ಮಹೋತ್ಸವದ ಕಾರ್ಯಕ್ರಮಕ್ಕೆ ವಿತರಿಸಿದ್ದ ಪಾಸ್‍ಗಳನ್ನು ಸಚಿವಾಲಯದ ಸಿಬ್ಬಂದಿ ವಿಧಾನಸೌಧದ ಒಳಗಡೆ ವಿತರಣೆ ಮಾಡುತ್ತಿದ್ದರಿಂದ ಪ್ರವೇಶದ್ವಾರದಲ್ಲಿ ಶಾಸಕರಿಗೆ ಕಿರಿಕರಿ ಉಂಟಾಗಿತ್ತು. ಭದ್ರತಾ ನೆಪದಲ್ಲಿ ಶಾಸಕರ ಜೊತೆ ಪೊಲೀಸರು ವಾಗ್ವಾದಕ್ಕೆ ಇಳಿದರು.

Facebook Comments

Sri Raghav

Admin